
ಹುಬ್ಬಳ್ಳಿ: ಓಂಕಾರ ಮೂವೀಸ್‌ರವರ ಶ್ರೀಮತಿ ಸುಜಾತ ರಾಜ್‌ಕುಮಾರ್ ಅರ್ಪಿಸುವ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಎಂಬ ಭಕ್ತಿಪ್ರಧಾನ ಕನ್ನಡ ಸಿನಿಮಾ ಸಧ್ಯದಲ್ಲಿಯೇ ತೆರೆಗೆ ಬರಲಿದೆ ಎಂದು ನಿರ್ದೇಶಕ ಪುರುಷೋತ್ತಮ್ ಓಂಕಾರ್ ಸ್ವಾಮಿಯವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈಗಾಗಲೇ ಇಪ್ಪತೈದಕ್ಕೂ ಹೆಚ್ಚು ಭಕ್ತಿ ಚಲನಚಿತ್ರಗಳನ್ನು ನೀಡಿರುವ ನಾನು ಈಗ ಶಿವಶರಣ ಸಿದ್ಧರಾಮೇಶ್ವರರ ಕುರಿತು ಚಿತ್ರ ನಿರ್ದೇಶಿಸುತ್ತಿದ್ದು ಈ ಚಿತ್ರದಲ್ಲಿ ನಾಯಕ ನಟರಾಗಿ ಉತ್ತರ ಕರ್ನಾಟಕದ ಬೈಲಹೊಂಗಲದ ಯುವ ಪ್ರತಿಭೆ ರಾವಣ ಕತ್ತಿಯವರು ಸಿದ್ಧರಾಮೇಶ್ವರನಾಗಿ ಅಭಿನಯಿಸಿದ್ದಾರೆ. ಒಂದು ಪೌರಾಣಿಕ ಕಥೆಯನ್ನು ಈಗಿನ ಕಾಲದ ತಾಂತ್ರಿಕತೆಯೊಂದಿಗೆ ಸಿದ್ಧಪಡಿಸಲಾಗಿದ್ದು ಸಿದ್ಧರಾಮೇಶ್ವರರ ಪವಾಡಗಳೊಂದಿಗೆ ಮನರಂಜನೆಯನ್ನು ಪೂರ್ಣ ತೋರಿಸಲಾಗಿದೆ. ಹನ್ನೆರಡನೆ ಶತಮಾನದ ಸನ್ನಿವೇಷಗಳನ್ನು ಸೃಷ್ಟಿಸಿದ್ದೇವೆ ಎಂದರು.
ಈಗಿನ ಕಾಲದ ಜನರಿಗೆ ಸಂತ ಮಹಾತ್ಮರ ಸಂಗತಿಗಳನ್ನು ಮನರಂಜನಾತ್ಮಕವಾಗಿ ಮುಟ್ಟಿಸಲು ಎನ್ ಎಸ್ ರಾಜಕುಮಾರ್ ಎನ್ನುವವರು ಈ ಚಿತ್ರಕ್ಕೆ ಬಂಡವಾಳವನ್ನು ಹೂಡಿಕೆ ಮಾಡಿದ್ದು ಹಾಗೂ ಸಹ ನಿರ್ಮಾಪಕರಾಗಿ ನಾನು ಸುನೀಲ್ ಕುಮಾರ್ ಕೈಜೋಡಿಸಿದ್ದೇನೆೆ.ಈ ಚಿತ್ರದಲ್ಲಿ ಎರಡು ಹಾಡುಗಳು ಹಾಗೂ ೪ ವಚನಗಳಿದ್ದು ಸಂಗೀತ ಸಂಯೋಜನೆ ರಾಜ್ ಭಾಸ್ಕರ್ ಮಾಡಿದ್ದಾರೆ. ಛಾಯಾಗ್ರಹಣ ಗೌರಿ ವೆಂಕಟೇಶ್.ಚಿತ್ರದ ಎಡಿಟಿಂಗ್ ಕಲರ್ ಕರೆಕ್ಷನ್ ಹಾಗೂ ಗ್ರಾಫಿಕ್ಸ್ ಆರ್ ಅನಿಲ್ ಕುಮಾರ್ ,ಪತ್ರಿಕಾಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಅವರದಿದೆ, ಮುಖ್ಯತಾರಾಗಣದಲ್ಲಿ ರಾವಣ ಕತ್ತಿ, ಗಣೇಶ್ ರಾವ್ ಕೇಸರಕರ್,ನಾಗೇಂದ್ರ ಅರಸು ,ಬಸವರಾಜ್, ರಕ್ಷ ಗೌಡ ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರವು ಅತಿ ಶೀಘ್ರದಲ್ಲಿ ಬೆಳ್ಳಿತೆರೆಯನ್ನು ಅಲಂಕರಿಸಲು ಸಿದ್ಧವಾಗಿದೆ. ಭಕ್ತಿ ಪ್ರಧಾನವಾದ ಸಿನಿಮಾಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ,ನಾನು ಕಮ಼ರ್ಷಿಯಲ್ ಸಿನಿಮಾ ,ಸಿರಿಯಲ್‌ಗಳನ್ನು ಮಾಡಿದವ, ಈಗ ಕೆಲವು ಚಾನೆಲ್‌ಗಳಲ್ಲಿ ನನ್ನ ಸಿರಿಯಲ್ ನಡೆಯುತ್ತಿವೆ. ಈಗ ಭಕ್ತ ಪ್ರಧಾನ ಚಲನಚಿತ್ರ ಮಾಡುತ್ತಿರುವೆ ಎಂದು ಸಹನಿರ್ಮಾಪಕ ಸುನೀಲಕುಮಾರ ಹೇಳಿದರು.
ನಾಯಕ ನಟ ರಾವಣ ಕತ್ತಿ ಮಾನಾಡಿ,ಶರಣರ ಬದುಕು ,ಅವರು ಸಮಾಜಕ್ಕೆ ನೀಡಿದ ಸಂದೇಶವನ್ನು ಜನರಿಗೆ ತಿಳಿಸಲು ಈ ಸಿನಿಮಾ ಮಾಡಲಾಗಿದೆ. ಬೇರೆ ಬೇರೆ ಹಲವು ಸಿನಿಮಾಗಳ ನಡುವೆ ಭಕ್ತಿ ಪ್ರಧಾನವಾದ ಸಿನಿಮಾ ನೋಡಿ ಉತ್ತರ ಕರ್ನಾಟಕದ ನಿಮ್ಮ ಮನೆಯ ಮಗನನ್ನು ಬೆಳೆಸಿ ಹಾರೈಸಿ ಎಂದರು. ರಕ್ಷಾಗೌಡ,ಪ್ರಮೀಳಾ ಸುಬ್ರಹ್ಮಣ್ಯ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಪ್ರೋತ್ಸಾಹಿಸಿ ಮಾಧ್ಯಮದ ಬಂಧುಗಳು ನೋಡಿ ಅಭಿಪ್ರಾಯ ತಿಳಿಸಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಹ ನಿರ್ಮಾಪಕರಾದ ಸುನಿಲ್ ಕುಮಾರ್ , ನಿರ್ದೇಶಕರಾದ ಪುರುಷೋತ್ತಮ್ ಓಂಕಾರ್ ಸ್ವಾಮಿ , ನಾಯಕ ನಟರಾದ ರಾವಣ ಕತ್ತಿ , ಪೋಷಕ ಪಾತ್ರಧಾರಿಯಾದ ರಕ್ಷಾ ಗೌಡ ,ಪ್ರಮೀಳಾ ಸುಬ್ರಹ್ಮಣ್ಯ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಇತರರು ಇದ್ದರು.