
ಬಾಗಲಕೋಟೆ : ಮಾದಾರ ಚೆನ್ನಯ್ಯ, ಡೊಹಾರ ಕಕ್ಕಯ್ಯ, ಹರಳ್ಯ ಸೇರಿದಂತೆ ಅನೇಕ ಕಾಯಕ ಶರಣರು ತಮ್ಮ ಕಾಯಕ ಜೊತೆಜೊತೆಗೆ ಸಾಮಾಜಿಕ ಸಮಾನತೆಗಾಗಿ ಅಪರಿಮಿತವಾಗಿ ಶ್ರಮಿಸಿದ್ದಾರೆ. ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಿ ಸಾಮಾಜಿಕ ಸಮಾನತೆಗೆ ಶ್ರಮಿಸಬೇಕು ಎಂದು ಸನ್ಮಾನ್ಯ ಶ್ರೀ ವಿಧಾನಪರಿಷತ ಸದಸ್ಯರಾದ ಪಿ. ಎಚ್ ಪೂಜಾರ್ ರವರು ಕರೆ ನೀಡಿದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಯಕವೇ ಶ್ರೇಷ್ಠ ಎಂದು ವಿಶ್ವಗುರು ಬಸವಣ್ಣ ಅವರು ಬಣ್ಣಿಸಿ ಕಾಯಕ ಶರಣರಿಗೆ ಹಾಗೂ ಅವರ ವೃತ್ತಿಗೆ ಗೌರವ ನೀಡಿದ್ದಾರೆ. ಬಸವಣ್ಣ ಅವರು ಸಾಮಾಜಿಕ ಕ್ರಾಂತಿ ಮಾಡಿರುವುದರ ಜೊತೆಗೆ ಅಪಾರವಾದ ಸಾಮಾಜಿಕ ಕಳಕಳಿ ಹೊಂದಿದ್ದರು. ಅಪ್ಪನು ಮಾದರ ಚೆನ್ನಯ್ಯ, ಬೊಪ್ಪನು ದೊಹಾರ ಕಕ್ಕಯ್ಯ, ಚೆನ್ನಯ್ಯನ ದಾಸನ ಮಗನು ಕಕ್ಕಯ್ಯನ ದಾಸಿಯ ಮಗಳು ಸಂಗವ ಮಾಡಿ ಇವರಿಬ್ಬರಿಗೆ ಹುಟ್ಟಿದ ಮಗ ನಾನು ಎಂದು ತಮ್ಮ ವಚನಗಳಲ್ಲಿ ಹೇಳುವ ಮೂಲಕ ಸಾಮಾಜಿಕ ಸಮಾನತೆಗೆ , ತಳ ಸಮುದಾಯಕ್ಕೆ ಪ್ರಾಶ್ಯಶ್ಯ ನೀಡುವ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ. ನಡೆ ನುಡಿ ಸಿದ್ದಾಂತಕ್ಕೆ ಬದ್ದವಾಗಿರುವ ಮೂಲಕ ಬಸವಣ್ಣ ಆದರ್ಶಗಳನ್ನು ಅನುಸರಿಸಬೇಕು. ಮನುಷ್ಯ ನಿಂದ ಮನುಷ್ಯ ನ ಶೋಷಣೆ ಇರಬಾರದು. ಲಿಂಗಬೇದ ಇರಬಾರದು. ಅದಕ್ಕಾಗಿ ಅಲ್ಲಮ ಪ್ರಭು ದೇವರ ಅಧ್ಯಕ್ಷತೆಯಲ್ಲಿ ನಡೆದ ಅನುಭವ ಮಂಟಪವನ್ನು ಭಾಗವಹಿಸಿದ್ದ 770 ಗಣಾಂಗಣರಲ್ಲಿ 77 ಮಹಿಳಾ ಶಿವಶರಣೆಯರಿದ್ದರು. ಎಲ್ಲರೂ ಪೀಠಾಧಿಪತಿಗಳಾಗಿದ್ದರು. ಜಾತಿ ಲಿಂಗ, ಧರ್ಮ ಭೇದವಿಲ್ಲದೇ ನಡೆದ ಅನುಭವ ಮಂಟಪ ಎಂದೆಂದೂ ಮಾದರಿಯಾಗಿದೆ ಎಂದರು
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಾಗಲಕೋಟೆ ಮತಕ್ಷೇತ್ರದ ಶಾಸಕರಾದ ಶ್ರೀ ಎಚ್. ವೈ. ಮೇಟಿ ಅವರು ಸಮ ಸಮಾಜದ ನಿರ್ಮಾಣಕ್ಕೆ ಶರಣರ ಕೊಡುಗೆ ಅಪಾರವಾದದ್ದು ಸಮಾಜದ ಇಂದಿನ ಪೀಳಿಗೆ ಶರಣರ ಸಂದೇಶಗಳನ್ನು ಅಳವಡಿಸಿಕೊಂಡು ಸಾಗಬೇಕಾಗಿದೆ ಜಯಂತಿಗೆ ಸೀಮಿತವಾಗಬಾರದು ಸರ್ವ ಸಮಾಜವೂ ಶರಣರ ತತ್ವಗಳನ್ನು ಪಾಲಿಸಿಕೊಂಡು ಬದುಕು ಸಾಗಿಸಿದರೆ ಸಮಾಜ ಕಲ್ಯಾಣವಾಗುತ್ತದೆ ಎಂದರು
ಕಾರ್ಯಕ್ರಮದಲ್ಲಿ ಹಟ್ಟಿ ಚಿನ್ನದ ಗಣಿ ನಿಯಮಿತ ಅಧ್ಯಕ್ಷರು ಹಾಗೂ ಬೀಳಗಿ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಜೇ. ಟಿ ಪಾಟೀಲ್, ಜಿಲ್ಲಾಧಿಕಾರಿ ಶ್ರೀಮತಿ ಕೆ.ಎಂ. ಜಾನಕಿ ಹಾಗೂ ಜಿ. ಪಂ. ಕಾರ್ಯನಿರ್ವಹಣಾ ಅಧಿಕಾರಿ ಶಶಿಧರ್ ಕುರೆರ್ ವಿಶೇಷ ಉಪನ್ಯಾಸ ನೀಡಿದ ಮುರುಗೇಶ್. ಫಕೀರಣ್ಣವರ, ಮನೋಹರ ಕದ್ಮ, ವೈ. ವೈ. ತಿಮ್ಮಾಪುರ, ಬಸವರಾಜ್ ಛಲವಾದಿ,ಹಣಮಂತ ಚಿಮ್ಮಲಗಿ, ವೈ. ಸಿ. ಕಾಂಬಳೆ ಸೇರಿದಂತೆ ವಿವಿಧ ಗಣ್ಯರು ಸಮಾಜ ಮುಖಂಡರು ಭಾಗವಹಿಸಿದ್ದರು