
ಪಬ್ಲಿಕ್ ರೈಡ್ ಧಾರವಾಡ
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಮೊದಲ ಸೆಮಿಸ್ಟರ್‌ನಲ್ಲಿ ವಿವಾದಿತ ಪಠ್ಯವನ್ನು ಸೇರ್ಪಡೆ ಮಾಡಿರುವ ನಡೆ ಖಂಡಿಸಿ ಹಾಗೂ ಈ ಕೂಡಲೇ ಆ ಪಠ್ಯವನ್ನು ತೆಗೆದು ಹಾಕುವಂತೆ ಆಗ್ರಹಿಸಿ, ಧಾರವಾಡದಲ್ಲಿ ಎಬಿವಿಪಿ ಕಾರ್ಯಕರ್ತರುಬೀದಿಗೆ ಇಳಿದು ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು.
ಅಖಿಲ್ ಭಾರತ ವಿದ್ಯಾರ್ಥಿ ಪರಿಷದ್ ಸಂಘಟನೆ ನೇತೃತ್ವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಭಾರತಾಂಬೆಯ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸಂಘಟನೆ ಪದಾಧಿಕಾರಿಗಳು ಕವಿವಿ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಮಲಿಂಗಪ್ಪ ಬೇಗೂರು ಎನ್ನುವ ಲೇಖಕರು ಬೆಳಗು ಎಂಬ ಪುಸ್ತಕವನ್ನು ಬರೆದಿದ್ದಾರೆ. ಆ ಪುಸ್ತಕದಲ್ಲಿ ಭಾರತ ಮಾತೆ, ಆರ್‌ಎಸ್‌ಎಸ್ ಹಾಗೂ ಭುವನೇಶ್ವರಿ ಕುರಿತಾಗಿ ವಿವಾದಿತ ಶಬ್ದಗಳನ್ನು ಬಳಸಿದ್ದಾರೆ. ಇದು ವಿದ್ಯಾರ್ಥಿ ಸಮೂಹ ನಡುವೆ ದ್ವೇಷ ಭಾವನೆ ಹರಡಿಸುತ್ತದೆ. ಹಾಗಾಗಿ ಈ ಕೂಡಲೇ ಆ ಪಠ್ಯವನ್ನು ಕೈಬಿಡಬೇಕು ಎಂದು ಅಗ್ರಹಿಸಿದರು. ಬಳಿಕ ಕುಲಪತಿಗಳಿಗೆ ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.