
ಪಬ್ಲಿಕ್ ರೈಡ್ ಧಾರವಾಡ
ತರಕಾರಿ ಸಾಗಿಸುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ರಸ್ತೆಯಲ್ಲಿ ತರಕಾರಿ ಚೆಲ್ಲಾಪಿಲ್ಲಿಯಾದ ಘಟನೆ ಧಾರವಾಡದ ಆರ್‌ಟಿಓ ಕಚೇರಿಯ ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆಯಲ್ಲಿ ಬೆಳಗಿನ ಜಾವ ಸಂಭವಿಸಿದೆ.
ನವನಗರ ಹತ್ತಿರದ ಆರ್‌ಟಿಓ ಕಚೇರಿ ಬಳಿಯ ಈ ದುರ್ಘಟನೆ ಸಂಭವಿಸಿದೆ. ಎಪಿಎಂಸಿ ಮಾರುಕಟ್ಟೆಯಿಂದ ತರಕಾರಿ ಲೋಡ್ ಮಾಡಿಕೊಂಡು ಪಿಕಪ್ ಬೊಲೆರೋ ಮಿನಿ ಗೂಡ್ಸ್ ವಾಹನ ಧಾರವಾಡ ಕಡೆ ತೆರಳುತಿತ್ತು. ಈ ಸಂದರ್ಭದಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಇನ್ನೂ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಸಂಭವಿಸಿಲ್ಲವೆಂದು ತಿಳಿದು ಬಂದಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ವಾಹನ ಪಲ್ಟಿಯಿಂದಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ವಾಹನ ರಸದತೆ ಪಕ್ಕಕ್ಕೆ ಸರಿಸಲು ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಧಾರವಾಡ ಸಂಚಾರಿ ಪೊಲೀಸರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.