
ಪಬ್ಲಿಕ್ ರೈಡ್ ಧಾರವಾಡ
ಧಾರವಾಡ ಉಪನಗರ ಠಾಣೆಯ ವ್ಯಾಪ್ತಿಯಲ್ಲಿ ಸೋಮವಾರ ತಡ ರಾತ್ರಿ ಪೊಲೀಸರು ಏರಿಯಾ ಪೊಲೀಸ್ ಬೈಕ್ ಪೆಟ್ರೋಲಿಂಗ್ ನಡೆಸಿ, ಪುಡಾರಿಗಳಿಗೆ ಖಡಕ್ ಎಚ್ಚರಿಕೆ ನೀಡುವುದರ ಜತೆಗೆ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರ ಭೇಟಿ ಮಾಡಿ ಕಾನೂನು ತಿಳುವಳಿಕೆ ನೀಡಿ 112 ಕುರಿತು ಜಾಗೃತಿ ಮೂಡಿಸಿದರು.
ನಗರದ ಉಪನಗರ ಪೊಲೀಸ್ ಠಾಣೆಯಿಂದ ತಡ ರಾತ್ರಿ ಏರಿಯಾ ಪೊಲೀಸ್ ಬೈಕ್ ಪೆಟ್ರೋಲಿಂಗ್ ಆರಂಭಿಸಿದ ಪೊಲೀಸರು, ಪ್ರಮುಖ ರಸ್ತೆ ಹಾಗೂ ವೃತಗಳಲ್ಲಿ ಸಂಚಾರಿ ನಡೆಸಿದರು. ಬಳಿಕ ಧಾರವಾಡ ಸವದತ್ತಿ ರಸ್ತೆಯ ಮದಿಹಾಳದ ಮುರುಘಾಮಠಕ್ಕೆ ಭೇಟಿ ನೀಡಿ ಮಠದಲ್ಲಿನ ಮಕ್ಕಳಿಗೆ ಕಾನೂನು ತಿಳುವಳಿಕೆ ನೀಡಿ 112 ಸಹಾಯವಾಣಿಯ ಕುರಿತು ಜಾಗೃತಿ ಮೂಡಿಸಿದರು. ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.