
ಪಬ್ಲಿಕ್ ರೈಡ್ ಧಾರವಾಡ
ಕ್ಯೂಸರ್ ವಾಹನ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಎಂಟು ಜನರಿಗೆ ಗಾಯವಾಗಿರುವ ಘಟನೆ ಧಾರವಾಡ ಹೊರವಲಯದ ನರೇಂದ್ರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಭಾನುವಾರ ತಡ ರಾತ್ರಿ ನಡೆದಿದೆ.
ಕುಟುಂಬವೊದರ ಮದುವೆ ನಿಮಿತ್ಯ ಹುಬ್ಬಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮದುವೆ ಬೆಳಗಾವಿ ಕಡೆಗೆ ಕ್ರೂಸರ್ ವಾಹನ ತೆರಳುತಿತ್ತು. ಇದೇ ವೇಳೆ ಲಾರಿಬೆಳಗಾವಿ ಕಡೆಯಿಂದ ಹುಬ್ಬಳ್ಳಿ ತರಳುತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ನಡೆಯುತ್ತಿದಂತೆ ಸ್ಥಳೀಯರು ಗಾಯಾಳುಗಳರಕ್ಷಣೆ ಮಾಡುವುದರ ಜತೆಗೆ ಪೊಲೀಸರಿಗೆಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಅದೃಷ್ಟವಶಾತ್ ದುರ್ಘಟನೆಯಲ್ಲಿಯಾವುದೇ ಪ್ರಾಣ ಹಾನಿ ವರದಿ ಆಗಿಲ್ಲ. ಕ್ರೂಸ್ ವಾಹನ ನಿರ್ಲಕ್ಷ್ಯದಿಂದ ಅಪಘಾತ ಸಂಭಿಸಿದೆ ಎಂದು ಸ್ಥಳೀಯರಿಂದ ತಿಳಿದು ಬಂದಿದೆ. ಇನ್ನೂ ಗ್ರಾಮೀಣ ಠಾಣೆ ಪೊಲೀಸರ ಪರಿಶೀಲನೆ ಬಳಿಕ ಗಾಯಾಳುಗಳ ವಿವರ ಜತೆಗೆ ದುರ್ಘಟನೆಗೆ ನಿಖರ ಕಾರಣವೇನು ಎಂಬುವುದು ತಿಳಿದು ಬರಬೇಕಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.