
ಹುಕ್ಕೇರಿ
ಶನಿವಾರ ದಿನಾಂಕ:04-01-2025 ರಂದು ಹುಕ್ಕೇರಿ ಮತಕ್ಷೆತ್ರದ ಮಾನ್ಯ ಶಾಸಕರಾದಂತಹ ಶ್ರೀ ನಿಖಿಲ ಉಮೇಶ ಕತ್ತಿ ಇವರು ಸಾರ್ವಜನಿಕರ ಕುಂದು ಕೊರತೆಗಳ ಅಹವಾಲುಗಳನ್ನು ಆಲಿಸಲು ಹುಕ್ಕೇರಿ ಕ್ಷೆತ್ರದ ಗ್ರಾಮಗಳನ್ನು ಇವತ್ತಿನ ದಿನ ಆಯ್ದುಕೊಂಡಿದ್ದರು.
ಹೌದು ದಿನಾಂಕ 04-01-2025 ರಂದು ಮುಂಜಾಣೆ ಸೋಲಾಪುರ.ಗ್ರಾಮದಿಂದ ಪ್ರಾರಂಭವಾದ ಮಾನ್ಯ ಶಾಸಕರ ಕ್ಷೆತ್ರದ ಭೇಟಿಯು ಹೊನ್ನಹಳ್ಳಿ, ಕೋಣನಕೇರಿ, ಶೇಕಿನ ಹಸೂರ,ಭೈರಾಪೂರ, ಮತ್ತಿವಾಡ, ಹಿಟ್ನಿ,ಶಿಪ್ಪೂರ , ನಾಂಗನೂರ ಕೆ.ಎಸ್, ರಾಶಿಂಗ, ಬುಗಟೆ ಆಲೂರ, ಹಾಗೂ ಹಡಲಗಾ ಗೆ ಮುಕ್ತಾಯವಾ್ಯಿತು.
ಸದರಿ ಅಹವಾಲುಗಳನ್ನು ಆಲಿಸಲು ಹುಕ್ಕೇರಿ ಶಾಸಕರ ಜೊತೆಗೆ ಹುಕ್ಕೇರಿ ತಹಶಿಲ್ದಾರರು ಮಂಜುಳಾ ನಾಯಿಕ, ಸಂಕೇಶ್ವರ ಪೋಲಿಸ ಠಾಣೆಯ ಸಿ.ಪಿ.ಐ ಅವುಜಗಿ , ಬಿ.ಇ.ಓ ಅವರು, ಅರಣ್ಯ ಇಲಾಖೆಯ ಅಧಿಕಾರಿಗಳು, ಲೋಕಪಯೋಗಿ ಇಲಾಖೆ ಅಧಿಕಾರಿಗಳು, ಸ್ಥಳಿಯ ಮುಖಂಡರರಾದಂತಹ ಶಶಿರಾಜ ಪಾಟೀಲ, ರಾಜೇಂಧ್ರ ಪಾಟೀಲ, ಅಮರ ನಲವಡೆ, ಅಶೋಕ ಹಿರೆಕೋಡಿ, ಬಂಡು ಹತನೂರೆ, ಹಾಜರಿದ್ದರು.
ಸದರಿ ಕಾರ್ಯಕ್ರಮಕ್ಕೆ ಗ್ರಾಮದ ಎಲ್ಲ ಗ್ರಾಮಸ್ಥರು ಹಾಗೂ ಪತ್ರಕರ್ತರು ಸಹ ಹಾಜರಿದ್ದರು.
ವರದಿಗಾರರು : ಸಂತೋಷ ನಿರ್ಮಲೆ . ಪಬ್ಲಿಕ ರೈಡ್