
ಪಬ್ಲಿಕ್ ರೈಡ್ ಧಾರವಾಡ
ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ತಡ ಸಂಜೆ ಪುಂಡ ಪೋಕರಿಗಳಿಗೆ ಪೊಲೀಸರು ಬಿಸಿ ಮುಟ್ಟಿಸುವ ಕಾರ್ಯ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಉಲ್ಲಂಘನೆ ಮಾಡಿ ದುಷ್ಟಚಟಗಳನ್ನು ಮಾಡುತ್ತಿದವರನ್ನು ಕರೆ ತಂದು ಕಾನೂನು ಬಿಸಿ ಮುಟ್ಟಿಸಿದ್ದಾರೆ.
ಹೌದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಡ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಮಿಷನರ್ ಎನ್ ಶಶಿಕುಮಾರವರು ನಿಯೋಜನೆಗೊಂಡ ನಂತರ, ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಾನೂನು ಭಯವಿಲ್ಲದೆ ಉಲ್ಲಂಘಿಸುತ್ತಿರುವವರಿಗೆ ಏರಿಯಾ ಡಾಮಿನೇಷನಡಿ ಕಾನೂನು ಬಿಸಿ ಮುಟ್ಡಿಸುವ ಕಾರ್ಯ ನಡೆಯುತ್ತಿದ್ದು, ನಿನ್ನೆ ತಡ ಸಂಜೆ ಶಹರ ಪೊಲೀಸ್ ಠಾಣೆಯ ಅಧಿಕಾರಿಗಳು ಏರಿಯಾ ಡಾಮಿನೇಷನ ಮಾಡುವ ಮೂಲಕ ಪುಂಡ ಪೋಕರಿಗಳಿಗೆ ಕಾನೂನು ಬಿಸಿ ಮುಟ್ಟಿಸಿದ್ದಾರೆ.
ಶಹರ ಠಾಣೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇರಿ ಮದ್ಯಪಾನ ಮಾಡುವ ಮೂಲಕ ಕಾನೂನು ಉಲ್ಲಂಘಿಸುತ್ತಿರುವವರು ಹಾಗೂ ಜನನಿಬಿಡು ಪ್ರದೇಶಗಳಲ್ಲಿ ಹರಟೆ ಹೊಡೆಯುವವರನ್ನು ಕರೆತಂದು ದಂಡಾಸ್ತ್ರ ಪ್ರಯೋಗ ಮಾಡಿ ಕಾನೂನಿನ ಪಾಠ ಮಾಡಿದ್ದಾರೆ. ಈ ಸಂದರ್ಭದಲ್ಲಿ ಧಾರವಾಡ ಎಸಿಪಿ ಪ್ರಶಾಂತ ಸಿದ್ಧನಗೌಡರು, ಶಹರ ಪೊಲೀಸ ಠಾಣೆಯ ಅಧಿಕಾರಿಗಳಾದ ನಾಗೇಶ್ ಕಾಡದೇವರಮಠ ಸೇರಿ ಅನೇಕ ಸಿಬ್ಬಂದಿಗಳು ಉಪಸ್ಥಿತರಿದ್ದರು.