
ಪಬ್ಲಿಕ್ ರೈಡ್ ಧಾರವಾಡ
6 ತಿಂಗಳ ಹಿಂದೆ ಧಾರವಾಡದ ನವಲೂರಿನಲ್ಲಿ ಮನೆ ಮಾಲೀಕನ ಕಟ್ಟಿಹಾಕಿ ಕಳ್ಳತನ ಪ್ರಕರಣ… ಆಂದ್ರದ ನಟೋರಿಯಸ್ ಚಡ್ಡಿ ಗ್ಯಾಂಗ್ ಮೇಲೆ ಪೊಲೀಸರ ಫೈರಿಂಗ್…
ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಗಂಡ ಹೆಂಡತಿಯ ಕೈಕಾಲು ಕಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿ ಪರಾರಿಯಾಗಿದ್ದ ಆಂದ್ರಾ ಮೂಲದ ನಟೋರಿಯಸ್ ಚಡ್ಡಿ ಗ್ಯಾಂಗ್ ದರೊಡೆಕೋರನ ಮೇಲೆ ವಿದ್ಯಾಗಿರಿ ಠಾಣೆಯ ಪೊಲೀಸರು ಫೈರಿಂಗ್ ಮಾಡಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ಕಳೆದ 6 ತಿಂಗಳ ಹಿಂದೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನರಾಯಾಪುರ ನವಲೂರು ಒಳ ರಸ್ತೆಯಲ್ಲಿನ ನೂತನ ಲೇಔಟನಲ್ಲಿನ ಅಶೋಕ ಕದಂ ಎಂಬುವರ ನಿವಾಸದ ಮುಖ್ಯ ದ್ವಾರಕ್ಕೆ ರಾತ್ರಿ ಬೃಹತ್ ಕಲ್ಲಿನ ಸಹಾದಿಂದ ಒಡೆದು ಮನೆಯಲ್ಲಿದ್ದ ಹಿರಿಯ ದಂಪತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿದ ನಡೆಸಿ ದರೋಡೆ ಮಾಡಿ ಪರಾರಿಯಾಗಿದ್ರು. ದರೋಡೆಕೋರ ಅಟ್ಟಹಾಸ ಸಿಸಿಟಿಯ ದೃಶ್ಯದಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ವಿದ್ಯಾಗಿರಿ ಪೊಲೀಸ್ ಟೀಂಗೆ, ಈ ಕೃತ್ಯ ಆಂಧ್ರಪ್ರದೇಶದ ಕರ್ನುಲ್’ನ ನಟೋರಿಯಸ್ ಚಡ್ಡಿ ಗ್ಯಾಂಗ್ ಅನ್ನೋದೇ ಅನ್ನುವುದು ತಿಳಿದಿತ್ತು.
ಈ ಪ್ರಕರಣವನ್ನು ಬೆನ್ನತ್ತಿದ್ದ ವಿದ್ಯಾಗಿರಿ ಠಾಣೆಯ ಪೊಲೀಸರಿಗೆ ಇದೇ ಗ್ಯಾಂಗ ಅದೇ ಏರಿಯಾದಲ್ಲಿ ಮತ್ತೊಂದು ದರೋಡೆಗೆ ಹೊಂಚು ಹಾಕಿರುವ ಖಚಿತ ಮಾಹಿತಿಮೇರೆಗೆ ದಾಳಿ ಮಾಡಿದ ವೇಳೆ, ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ರು. ಆ ವೇಳೆ ಆತ್ಮರಕ್ಷಣೆಗಾಗಿ PSI ಪ್ರಮೋದ ದರೊಡೆಕೋರ ಪಾಲಾ ವೆಂಕಟೇಶ್ವರ ರಾವ್ ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ಘಟನೆಯಲ್ಲಿ PSI ಪ್ರಮೋದ ಸೇರಿದಂತೆ ಓರ್ವ ಪೊಲೀಸ್ ಕಾನ್ಸೆಬಲ್‌ಗೆ ಗಾಯವಾಗಿದೆ. ಕಮಿಷನರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇನ್ನೂ ದರೋಡೆಕೋರ ಸೇರಿ ಪೊಲೀಸ್ ಅಧಿಕಾರಿಗಳಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.