April 18, 2025

ಪಬ್ಲಿಕ್ ರೈಡ್ ಹುಬ್ಬಳ್ಳಿ

ಸಿಟಿ ರವಿಯವರು ಈಗಾಗಲೇ ಎಳು ಪೇಜ್ ಪತ್ರವನ್ನು ಬರೆದಿದ್ದಾರೆ. ಆದರೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರಿಂದ ಇದುವರೆಗೆ ಯಾವುದೇ ಪತ್ರ ಬಂದಿಲ್ಲ‌ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರು ಹೇಳಿದರು.

ಈ ಕುರಿತು ನಗರದಲ್ಲಿ‌ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪರಿಷತ್ ಸದಸ್ಯರಾದ ಸಿಟಿ ರವಿಯವರು ಪತ್ರದಲ್ಲಿ ಪೊಲೀಸರು ನಡೆಸಿಕೊಂಡಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿಟಿ ರವಿಯವರು ಸ್ಟ್ರೈಕ್ ಮಾಡುವ ವೇಳೆ ಸಂಜೆ 6 ಗಂಟೆಗೆ ಪೊಲೀಸರ ವಶಕ್ಕೆ ಪಡೆದಿರುವುದು ಹೇಳಿಕೊಂಡಿದ್ದಾರೆ.‌ ರವಿಯವರು ನಮ್ಮ ಸದನದ ಸದಸ್ಯರಾಗಿದ್ದು, ಹಾಗಾಗಿ‌ ಅವರ ಹಕ್ಕು ಚ್ಯುತಿ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಜತೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಯಾವುದೇ ಪತ್ರ ಇನ್ನೂಬಂದಿಲ್ಲ.

ಘಟನಾ ದಿನ ಲಕ್ಷ್ಮೀ ‌ಅವರು ನೋವಿನಲ್ಲಿದ್ದರು, ಇತ್ತೀಚಿನ ಎರಡು ದಿನಳಿಂದ ಮಾಧ್ಯಮಗಳಲ್ಲಿ‌ ಅವರ ಹೇಳಿಕೆ ಗಮನಿಸಿದ್ದೇವೆ. ಅವರ ಹೇಳಿಕೆ ನೋಡಿದ್ದಾಗ‌ ಅವರು ನೊಂದಿರುವುದು ಗೊತ್ತಾಗುತ್ತೆ. ಕಾನೂನು ತನಿಖೆ ಹೊರತುಪಡಿಸಿ ಹೆಣ್ಮಕ್ಕಳಿಗೆ‌ ಗೌರವ ನೀಡುವುದು ನಮ್ಮ‌ ಧರ್ಮ. ನಮ್ಮಗೂ ಹೆಣ್ಮಕ್ಕಳು ಇದ್ದಾರೆ ಲಕ್ಷ್ಮೀ ಅವರು ನಮ್ಮಗೆ ಮಗಳೆ ಅಂತಾ ತಿಳ್ಕೊಂಡಿದ್ದೇವೆ.‌ ಸಿಎಂ ಅವರೊಂದಿಗೆ ಮಾತಾಡಿ ಸದ್ಯ ಈ ವಾತಾವರಣ ತಿಳಿ ಮಾಡೋ ಪ್ರಯತ್ನದಲ್ಲಿದ್ದೇನಿ.

ನನ್ನ ತೀರ್ಮಾನ ತೆಗೆದುಕೊಂಡಿದ್ದೇನೆ, ಅದಕ್ಕೆ ಬಹುತೇಕರು ಒಳ್ಳೆಯ ತೀರ್ಮಾನ ಅಂತಿದ್ದಾರೆ.‌ ಯಾರಿಗೂ ನೋವಾಗದ ರೀತಿಯಲ್ಲಿ ತೀರ್ಮಾನ ಮಾಡಿದ್ದೇನಿ. ಪರಿಷತ್ ಸದನದ ಘಟನೆಯ ಕುರಿತು ರಾಜ್ಯಪಾಲರ ಮಾಹಿತಿ ಕೇಳಿರುವ ವಿಚಾರ ಮಾತನಾಡಿ, ರಾಜ್ಯಪಾಲರು ಮಾಹಿತಿ ಕೇಳಿರುವುದು ನೀಜ. 19 ದಿನಾಂಕದಂದು ಆಗಿರುವ ಘಟನೆ ವಿವರಣೆ ಕೇಳಿದರು, ರಾಜ್ಯಪಾಲರಿಗೆ ವಿವರಣೆ ನೀಡಿದ್ದೇನಿ. ಡಿಸೆಂಬರ್ 27 ರಂದು ಬೆಳಗಾವಿಗೆ ತೆರಳಲಿದ್ದೇನಿ ಸಿಕ್ಕರೆ ಮಾತಾಡುತ್ತೇನೆ, ಇಲ್ವಾದಲ್ಲಿ ಬೆಂಗಳೂರಿನಲ್ಲಿ ಮಾತಾಡುತ್ತೇನೆ. ಈ ಪ್ರಕರಣ ಸಾಮಾಧಾನ ಮಾಡೋ ಜವಾಬ್ದಾರಿ ಎಲ್ಲರ ಮೇಲೂ ಇದೆ, ಸಮಾಧಾನ ಮಾಡೋವುದು ಎಲ್ಲರಿಗೂ ಒಳ್ಳೆಯದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!