ಧಾರವಾಡ
ಯೋಗಿಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯ ಯಾವಾಗ ನನ್ನನ್ನು ಮಾಫಿ ಸಾಕ್ಷಿ ಎಂದು ಪರಿಗಣಿಸಿತೋ, ಅಂದಿನಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಯೋಗೀಶಗೌಡ ಹತ್ಯೆ ಪ್ರಕರಣದ ಎ1 ಆರೋಪಿ ಬಸವರಾಜ ಮುತ್ತಗಿ ಹೇಳಿದರು.
ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ತೆರಳಿ ಜೀವ ಬೆದರಿಕೆ ಪ್ರಕರಣ ದಾಖಲಿಸಿದ ಬಳಿಕ ಮಾದ್ಯಮಕ್ಕೆ ಮಾತನಾಡಿದ ಅವರು, ಅಶ್ವಥ್ ಎಂಬಾತ ನಾನು ಮಾಫಿ ಸಾಕ್ಷಿಯಾಗುವಾಗಲೂ ಸಾಕಷ್ಟು ಬೆದರಿಕೆ ಹಾಕಿದ್ದ. ನಿನ್ನೆ ರಾತ್ರಿ ಮತ್ತೆ ಕರೆ ಮಾಡಿ ನೀನು ಅಪೂವರ್ ಆಗಿದ್ದೇ ತಪ್ಪು ಎಂದು ಸಾಕ್ಷಿಯನ್ನೇ ಹೇಳದಂತೆ ಮಾಡುತ್ತಿದ್ದಾರೆ.
ಬಾಕಿ ಎಲ್ಲ ವಿಚಾರಗಳನ್ನು ಪೊಲೀಸರ ಗಮನಕ್ಕೆ ತಂದಿದ್ದೇನೆ ಅವರು ಕ್ರಮ ಕೈಗೊಳ್ಳುತ್ತಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲೇ ನ್ಯಾಯಾಲಯದ ಆದೇಶದಂತೆ ನನಗೆ ಭದ್ರತೆ ಕೊಡಲಾಗಿದೆ. ಈಗ ಆಗಿರುವ ಬೆಳವಣಿಗೆಯನ್ನೂ ಕೋರ್ಟ್ ಗಮನಕ್ಕೆ ತರುತ್ತೇನೆ. ಈ ಎಲ್ಲ ವಿಚಾರವನ್ನು ಪೊಲೀಸರ ಗಮನಕ್ಕೆ ಸುದೀರ್ಘವಾಗಿ ತಂದಿದ್ದೇನೆ.
ಈ ಪ್ರಕರಣದಲ್ಲಿ ನ್ಯಾಯ ಉಳಿಯುತ್ತದೆ. ಆ ಭರವಸೆ ನನಗಿದೆ. ಜತೆಗೆ ಮಾಫಿ ಸಾಕ್ಷಿಯಾದ ಮೇಲೆ ಬೆದರಿಕೆ ಕರೆಗಳು ನನಗೆ ಹೆಚ್ಚಾಗಿವೆ. ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳೊಂದಿಗೆ ಮಾಹಿತಿ ನೀಡುತ್ತೇನೆ. ಯೋಗೀಶಗೌಡರ ಹತ್ಯೆ ಪ್ರಕರಣದಲ್ಲಿ ಹೋರಾಟ ಮಾಡಿದವರಿಗೂ ತೊಂದರೆ ಇದೆ. ಇಲ್ಲಿ ನ್ಯಾಯ ಉಳಿಯಬೇಕು. ಈ ಪ್ರಕರಣವನ್ನು ಇಲ್ಲಿಯವರೆಗೆ ತಂದವರಿಗೂ ಬೆದರಿಕೆ ಇದೆ. ಅವರೂ ಹುಷಾರಾಗಿ ಇರಬೇಕು ಎಂದರು.