ಧಾರವಾಡ
ಲಾರಿ ಹಾಗೂ ಕಾರ ನಡುವೆ ಡಿಕ್ಕಿ ಸಂಭವಿಸಿ ಕಾರನಲ್ಲುದ ಒರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಧಾರವಾಡದ ಕೆಲಗೇರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಧಾರವಾಡ ಕೆಲಗೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿಯ ಈ ದುರ್ಘಟನೆ ನಡೆದಿದ್ದು, ಎರಡು ವಾಹನಗಳ ಡಿಕ್ಕಿ ರಭಸಕ್ಕೆ ಹುಂಡೈ ಕಂಪನಿಯ ಕಾರ್ ನುಜ್ಜುಗುಜ್ಜಾಗಿದೆ. ಧಾರವಾಡದ ನರೇಂದ್ರ ಕೂಡ ಮಾರ್ಗವಾಗಿ ಕಾರ್ ಹೆದ್ದಾರಿ ಮೂಲಕ ಹುಬ್ಬಳ್ಳಿ ಕಡೆ ಸಾಗುತಿತ್ತು, ಲಾರಿ ಹುಬ್ಬಳ್ಳಿ ಕಡಿಯಿಂದ ಬೆಳಗಾವಿ ಕಡೆಗೆ ತೆರಳತಿತ್ತದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಇನ್ನೂ ಕಾರ್ ಹಾಗೂ ಹಬ್ಬಳ್ಳಿ ನೋಂದಣಿ ಹೊಂದಿದೆ. ಅಪಘಾತ ನಡೆಯುತ್ತಿದಂತೆ, ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ಸಂಚಾರಿ ಠಾಣೆ ಪೊಲೀಸರು ಕಾರನಲ್ಲಿದ್ದ ಗಾಯಾಳು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಘಟನೆಯಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ್ ಅಸ್ತವ್ಯಸ್ತತೆ ಉಂಟಾಗಿತ್ತು. ಸಂಚಾರಿ ಪೊಲೀಸರು ಅಪಘಾತಗೊಂಡ ವಾಹನಗಳನ್ನು ರಸ್ತೆ ಕಕ್ಕೆ ಸರಿಯಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಈ ಕುರಿತು ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಪ್ರಾಥಮಿಕ ತನಿಖೆಯ ನಂತರವಷ್ಟೇ ಗಾಯಾಳು ಹೆಸರು ತಿಳಿದು ಬರಬೇಕಾಗಿದೆ.