
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ ಸಮೀಪದ ಕಳಸ್ರಿ ನಗರದಲ್ಲಿ ರಮಾಬಾಯಿ ರಾಜ್ಯ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ಕನ್ನಡ ರಾಜ್ಯೋತ್ಸವದಲ್ಲಿ ಸಮಾಜ ಸೇವಕ ಕನ್ನಡಪರ ಚಿಂತಕ ಡಾ.ಸಂಗನ ಬಸಪ್ಪ ಬಿರಾದಾರ್ ಅವರನ್ನು ಅಭಿನಂದಿಸಲಾಯಿತು .ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ, ಸಂಘದ ಅಧ್ಯಕ್ಷೆ ಗಿರಿಜ ಎನ್, ಪ್ರಧಾನ ಕಾರ್ಯದರ್ಶಿ ಸವಿತಾ ಡಿ.ಎನ್, ದಾಸರಹಳ್ಳಿ ಕ್ಷೇತ್ರ ಘಟಕದ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ವೈ.ಬಿ.ಎಚ್ ಜಯದೇವ್, ಜೆಡಿಎಸ್ ಮುಖಂಡ ಅಂದಾನಪ್ಪ, ಸಮಾಜ ಸೇವಕರಾದ ಲತಾ ಕುಂದರಗಿ, ಬಿ.ಟಿ. ಶ್ರೀನಿವಾಸ್, ಬಲರಾಮ್, ಎಸ್. ಮಂಜುನಾಥ್(ಎಬಿಬಿ),ಎ.ಎನ್. ನಾಗರಾಜ ಗೌಡ, ಶಕ್ತಿಅಸ್ತ್ರ ಮಂಜುನಾಥ್ ಮುಂತಾದವರಿದ್ದರು.