
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಹೆಗ್ಗನಹಳ್ಳಿಯ ಬಸ್ ಸ್ಟಾಪ್ ಹತ್ತಿರದ ಬಾಬಾ ಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಹೆಗ್ಗನಹಳ್ಳಿಯ ಗಜಪಡೆ ನ್ಯೂಸ್ ಹಾಗೂ ಕರ್ನಾಟಕ ಬಹುಜನ ಚಳುವಳಿ ರಾಜ್ಯಧ್ಯಕ್ಷ ಕನಕನಹಳ್ಳಿ ಕೃಷ್ಣಪ್ಪ ಅವರು ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಅದ್ದೂರಿಯಾಗಿ ಸಂವಿಧಾನ ಸಮರ್ಪಣ ದಿನವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮೈಕಲ್ ಬಾಬು,ಕರ್ನಾಟಕ ಬಹುಜನ ಚಳುವಳಿ ಕಾರ್ಯಾಧ್ಯಕ್ಷ ವಿಜಯ್ ಕುಮಾರ್, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಕೆ ಆರ್ ಕುಮಾರ್, ಪತ್ರಕರ್ತರಾದ ಕುಮಾರಯ್ಯ, ಗೋಪಿ, ಹಾಗೂ ದಲಿತ ಪರ ಚಿಂತಕರು, ಹೋರಾಟಗಾರರು ಮುಂತಾದವರು ಭಾಗವಹಿಸಿದ್ದರು.