April 18, 2025

ಪಬ್ಲಿಕ್ ರೈಡ್ ಧಾರವಾಡ

ಮಾದಕ ವಸ್ತು ಬಗ್ಗೆ ಜಾಗೃತಿ ಮೂಡಿಸೋಕೆ ನಾನು ಬಂದಿರುವೆ. ಹು-ಧಾ ಪೊಲೀಸ್ ಆಯುಕ್ತರು ಮನಚಿ ಮೇರೆಗೆ ನಾನೂ ಈ ಜಾಗೃತಿಯಲ್ಲಿ ಭಾಗಿಯಾಗಿದ್ದೇನೆ. ಸಿನಿಮಾದಿಂದ ಯುವ ಪೀಳಿಗೆ ಹಾಳಾಗುತ್ತಿದೆ ಅನ್ನೋ ಮಾತುಗಳು ಇವೆ, ಅದೂ ತಪ್ಪು. ಎಲ್ಲ ನಟರು ಮಾದಕ ವಿರೋಧಿ ಅಭಿಯಾನಕ್ಕೆ ಕೈ ಜೋಡಿಸಬೇಕು ಎಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರವರು ಹೇಳಿದರು.

ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಹಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ ನೇತೃತ್ವದಲ್ಲಿ ನಡೆದ ಮಾದಕ ವಿರೋಧಿ ಅಭಿಯಾನದಲ್ಲಿ ಭಾಗಿಯಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಅಭಿಯಾನಕ್ಕೆ ನಾನು ಸದ ಬೆಂಬಲ ಕೊಡುವೆ. ಮಾದಕ ವಸ್ತು ವಿರೋಧಿಗಾಗಿ ಜಾಥಾ ಮಾಡಬೇಕು, ಇಲ್ಲಿ ಯಾವುದೇ ಜಾಥಾ ಮಾಡಿದರೆ ನಾನು ಭಾಗಿಯಾಗುವೆ. ಇಂತಹ ಅಭಿಯಾನಗಳಿಗೆ ನಮ್ಮ ಸಿನಿಮಾ ನಟರು ಕೂಡಾ ಬರಬೇಕು. ಮಾದಕ ವಸ್ತುಗಳು ಇರಲೇಬಾರದು.

ಇನ್ನೂ ಸಿನಿಮಾದಿಂದಲೇ ಯುವಪೀಳಿಗೆ ದಾರಿ ಬಿಡುತ್ತದೆ ಎನ್ನುವುದು ತಪ್ಪು.. ಎಲ್ಲದಕ್ಕೂ ಸಿನಿಮಾ ದೂಷಿಸಿದರೇ ಹೇಗೆ?. ಸಿನಿಮಾ ಕೇವಲ ಮನರಂಜನಾ ಮಾಧ್ಯಮ, ಸಿನಿಮಾದಲ್ಲಿಯೂ ಸಂದೇಶ ಕೊಡುತ್ತೇವೆ. ಇನ್ನೂ ನಾನು ನಟನೆ ಮಾಡಿರುವ ಭೈರತಿ ರಣಗಲ್‌ಗೆ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ಇದೆ, ಒಳ್ಳೆ ಸಿನಿಮಾ ಜನ ಬೆಂಬಲಿಸಿದ್ದಾರೆ. ಇತ್ತೀಚೆಗೆ ಚಿತ್ರಮಂದಿರಕ್ಕೆ ಜನ ಬರೋದು ಕಡಿಮೆಯಾಗಿತ್ತು.ಈಗ 3-4 ಸಿನಿಮಾಗಳಿಂದ ಜನ ಬರುತ್ತಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!