April 18, 2025

ಪಬ್ಲಿಕ್ ರೈಡ್ ಧಾರವಾಡ

ಕಳೆದೊಂದು ವಾರದಿಂದ ಧಾರವಾಡ ಹುಬ್ಬಳ್ಳಿಯ ನಡುವೆ ಬರೋ ನವನಗರದಲ್ಲಿ ನೂತನ ಎಂಆರ್‌ಪಿ ಶಾಪ್‌ ಸೇರಿ ಸಂಗಮ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ನೂತನ ಎಂಆರ್‌ಪಿ ಶಾಪ ಮುಂದೆ ಮಹಿಳೆಯರು ಪ್ರತಿದಿನ ಸಂಜೆ ನಡೆಸುತ್ತಿರೂವ ಪ್ರತಿಭಟನೆ ಮುಂದುವರೆದಿದ್ದು, ಕಳೆದ ಮಂಗಳವಾರ ತಡ ರಾತ್ರಿಯು ಮಹಿಳೆಯರು ಪ್ರತಿಭಟನೆ ಮಾಡಿ ಅಬಕಾರಿ ಇಲಾಖೆ ಮತ್ತು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

ನವನಗರದ ಕರ್ನಾಟಕ ವೃತದ ಸಮೀಪ‌ ನೂತನವಾಗಿ ಆರಂಭವಾಗಿರೋ ದಿ ಲಿಕ್ಕರ್ ಹೌಸ್ ಹಾಗೂ ಕ್ಯಾನ್ಸರ್ ಆಸ್ಪತ್ರೆ ಬಳಿ ಇರೋ ಸಂಗಮ ಬಾರ್ ಆ್ಯಂಡ್ ರೆಸ್ಟೋರೆಂಟ್ ಸ್ಥಳಾಂತರ ಮಾಡುವಂತೆ ದಿ ಲಿಕ್ಕ ಹೌಸ ಮುಂಭಾಗದಲ್ಲಿ ತಡ ರಾತ್ರಿಯವರೆಗೆ ಮಹಿಳೆಯರು ಪ್ರತಿಭಟನೆ ನಡಸಿದ್ದು, ಈ ಪ್ರತಿಭಟನೆಗೆ ಸ್ಥಳೀಯ ಪುರುಷರು ಬೆಂಬಲ ಸೂಚಿಸಿ ಪ್ರೊಟೆಸ್ಟ್‌ಗೆ ಸಾಥ್ ನೀಡಿದರು.

ಇನ್ನೂ ಪ್ರತಿಭಟನೆ ವೇಳೆ ರಾಜ್ಯ ಸರ್ಕಾರ ಸೇರಿ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನವನಗರ ಹೊಂದಿಕೊಂಡಿರೋ ಹುಬ್ಬಳ್ಳ ಧಾರವಾಡ ಮುಖ್ಯ ರಸ್ತೆಯಲ್ಲಿ ಅನೇಕ‌ ಬಾರ್‌ಗಳಿವೆ, ಆದರೆ ಇಲ್ಲಿ ಕ್ಯಾನ್ಸರ್ ಆಸ್ಪತ್ರೆ ಹತ್ತಿರದಲ್ಲಿಯೇ ಬಾರ್ ಆ್ಯಂಡ್ ರೆಸ್ಟೋರೆಂಟ್ ಇದೆ. ಜತೆಗೆ ಸಾರ್ವಜನಿಕ ನಿಬಿಡ ಪ್ರದೇಶ ಹಾಗೂ ಶಾಲೆ ಕಾಲೇಜು ಮಕ್ಕಳು ಸೇರಿ ಮಹಿಳೆಯರು ಹೆಚ್ಚಾಗಿ ಓಡಾಟ ಮಾಡೋ ಮುಖ್ಯ ರಸ್ತೆಯಲ್ಲಿ ಮತ್ತೊಂದು ಎಂಆರ್‌ಪಿ ಶಾಪ್ ತೆರೆಯಾಗಿದೆ.

ಅಕ್ಕಪಕ್ಕದ ಬೀದಿಯಲ್ಲಿ ದೇವಸ್ಥಾನಗಳಿದ್ದು, ಶಾಲೆಗಳು ಇವೆ. ಕಳೆದೊಂದು ವಾರದಿಂದ ಈಲ್ಲಿರೋ ಮಹಿಳೆಯರು ಪ್ರಿತಭಟನೆ ಮಾಡುತ್ತಿದ್ದರು, ಅಬಕಾರಿ ಇಲಾಖೆ ಅಧಿಕಾರಿಗಳು, ಸಚಿವರು ಗಮನ ಹರೀಸುತ್ತಿಲ್ಲ ಎಂದು ಆಕ್ರೋಶಗೊಂಡು, ಈ ಕೂಡಲೇ ಎರಡು ಸರಾಯಿ ಶಾಪ್‌ಗಳನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು. ಎಲ್ಲಿಯವರೆಗೆ ಈ ಸರಾಯಿ ಅಂಗಡಿಗಳು ಸ್ಥಳಾಂತರ ಮಾಡುವುದಿಲ್ವೋ ಅಲ್ಲಿಯವರೆಗೆ ಹೋರಾಟ ನಿಲ್ಲದು ಎಂದು ನೂತನ ಎಂಅರ್‌ಪಿ ಶಾಪ್ ಮುಂದೆ ಪ್ರತಿಭಟನೆ ಮುವರೆಸುವುದಾಗಿ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!