January 29, 2026

ಪಬ್ಲಿಕ್ ರೈಡ್ ಧಾರವಾಡ 

ಸಪ್ತಪದಿ ತುಳಿದು ಪತಿಯ ಜೊತೆಗೆ ಸುಖ ಜೀವನ ನಡೆಸಬೇಕಾಗಿದ್ದ ಇಬ್ಬರು ಚಾಲಕಿ ಮಹಿಳೆಯರು ತಮ್ಮ ತಮ್ಮ ಪ್ರಿಯಕರರೊಂದಿಗೆ ಸೇರಿ ಮಕ್ಕಳನ್ನು ಕಿಡ್ನಾಪ ಮಾಡಿಕೊಂಡು, ಮಕ್ಕಳ ಪತಿ ಹಾಗೂ ಪೋಷಕರಿಗೆ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಭೇದಿಸುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಮಕ್ಕಳ ರಕ್ಷಣೆಯ ಜತೆಗೆ ನಾಲ್ವರನ್ನು ಬಂಧಿಸಿದ್ದಾರೆ. 

 

ಕಳೆದ ನವೆಂಬರ್ 7 ರಂದು ರೇಷ್ಮಾ ಹಾಗೂ ಪ್ರಿಯಾಂಕಾ ಸಾಂಬ್ರಾಣಿ ಇಬ್ಬರು ಮಹಿಳೆಯರು ಮಕ್ಕಳನ್ನು ರಾಣೆಬೆನ್ನೂರಿನ ಹಾಸ್ಟೆಲಗೆ ಮಕ್ಕಳನ್ನು ಸೇರಿಸುವಯದಾಗಿ ಮನೆಯವರಿಗೆ ತಿಳಿಸಿ ಇಬ್ಬರು ತಮ್ಮ ಆರು ಮಕ್ಕಳೊಂದಿಗೆ ಮನೆಯಿಂದ ಹೋಗಿದ್ದರು. ನಂತರ ಮನೆಯಿಂದ ಆಚ್ಚೆತೆರಳಿ ರೇಷ್ಮಾ ತನ್ನ ಪ್ರಿಯಕರ ಸುನೀಲನನ್ನು ಕುಡಿಕೊಂಡಿದ್ದಾಳೆ. ಇನ್ನೂ ಗಂಡನನ್ನು ಕಳೆದುಕೊಂಡಿದ್ದ ಪ್ರಿಯಾಕ ಕೂಡಾ ಶಿಕಾರಿಪುರದ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡ ಮಕ್ಕಳ ಪೋಷಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಹಣಕ್ಕೆ ಬೇಡಿಕೆ ಬರುತ್ತಿದಂತೆ ಮನೆಯ ಪೋಷಕರು ವಿದ್ಯಾಗಿರಿ ಪೊಲೀಸ್ ಠಾಣೆಗೆ ತೆರಳಿ ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದರು. ಮಹಿಳೆಯರಿಬ್ಬರು ತಮ್ಮ ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ಪುರುಷರೊಂದುಗೆ ಸೇರಿ ಮಕ್ಕಳ ಬೀಡಲು 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಇನ್ನೂ ದೂರು ಪಡೆದುಕೊಂಡ ವಿದ್ಯಾಗಿರಿ ಠಾಣೆಯ ಪೊಲೀಸರು ಆರು ಮಕ್ಕಳ ಪತ್ತೆಗಾಗಿ, ಮಹಾರಾಷ್ಟ್ರ ಹೈದರಾಬಾದ್ ತನಿಖೆ ಕೈಗೊಂಡಿದ್ದರು. ಇನ್ನೂ ಇಬ್ಬರು ಮಹಿಳೆಯರು ಆರು ಮಕ್ಕಳೊಂದಿಗೆ ತಮ್ಮ ಇಬ್ಬರು ಪ್ರಿಯಕರರೊಂದಿಗೆ ಇರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಈಗ ನಾಲ್ವರನ್ನು ಹೆಡೆಮುರಿ ಕಟ್ಟುವುದರ ಜೊತೆಗೆ ಆರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ಇನ್ನೂ ಮಕ್ಕಳ ನೋಡುತ್ತಿದಂತೆ ಎರಡು ಕೂಟುಂಬದ ಪೋಷಕರು ಮಹಿಳೆಯರ ಕೃತ್ಯಕ್ಕೆ ಹಿಡಿಶಾಪ ಹಾಕಿ ನಿಟ್ಟುಸಿರು ಬಿಟ್ಟು ಪೊಲೀಸರ ಕಾರ್ಯಕ್ಕೆ ಶ್ಲಾಘಿಸಿದರು. ಈ ಕುರಿತು ಮಾತನಾಡಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪೋನ ಕರೆ ಜಾಡು ಜತೆಗೆ ವಿವಿಧ ಅಯಾಮಗಳಲ್ಲಿ ತನಿಖೆ ಮಾಡಲಾಗಿದೆ. ಪೋಷಕರ ಮಾಹಿತಿ ಮೇರೆಗೆ ತನಿಖೆ ನಡೆಸಿ ಮಕ್ಕಳ ರಕ್ಷಣೆ ಜತೆಗೆ ಇಬ್ಬರು ಮಹಿಳೆಯರ ಬಂಧಿಸಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!