April 19, 2025

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ,

ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವುದು ಕನ್ನಡ ಭಾಷಾ, ಸಂಸ್ಕೃತಿಯನ್ನು ಸ್ಮರಿಸುವುದರ ಜೊತೆಗೆ ಜನರ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉತ್ತಮ ಕ್ರಮವಾಗಿದೆ ಎಂದು ಶಾಸಕ ಎಸ್ ಮುನಿರಾಜು ಹೇಳಿದರು.

ಕ್ಷೇತ್ರದ ಹೆಗ್ಗನಹಳ್ಳಿ ಕ್ರಾಸ್ ನ ನೀಲಕಂಠೇಶ್ವರ ದೇವಸ್ಥಾನದ ರಸ್ತೆಯಲ್ಲಿ ಕರುನಾಡು ಹಿತರಕ್ಷಣಾ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 18ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಹಾಗೂ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕರುನಾಡು ಹಿತರಕ್ಷಣಾ ಸೇವಾ ಸಂಘದ ಅಧ್ಯಕ್ಷರಾದ ಬಿ.ಪಿ ಲಕ್ಷ್ಮಣ್ ಮಾತನಾಡಿ, ನಮ್ಮ ಸಂಘದಲ್ಲಿ ಐನೂರಕ್ಕೂ ಹೆಚ್ಚು ಸದಸ್ಯರಿದ್ದು, ಸಂಘದ ವತಿಯಿಂದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ನೆರವಾಗುವಂತಹ ಯೋಜನೆಗಳನ್ನು ರೂಪಿಸಿಕೊಂಡು ಬರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಸ್ತ್ರೀರೋಗ ತಪಾಸಣೆ, ಮಧುಮೇಹ ತಪಾಸಣೆ, ಬಿಪಿ ತಪಾಸಣೆ ಸೇರಿದಂತೆ ವಿವಿಧ ರೋಗಗಳ ತಪಾಸಣೆ ನಡೆಸಿ ಅವಶ್ಯಕತೆ ಇರುವವರಿಗೆ ಔಷಧಿ ವಿತರಣೆ ಮಾಡಲಾಯಿತು. ಜೊತೆಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹೆಗ್ಗನಹಳ್ಳಿ ವಾರ್ಡ್ ನ ಮಾಜಿ ಬಿಬಿಎಂಪಿ ಸದಸ್ಯೆ ಭಾಗ್ಯಮ್ಮನವರ ಪತಿ ಕೃಷ್ಣಯ್ಯ, ದಾಸರಹಳ್ಳಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಪ್ತಗಿರಿ ಆನಂದ್, ಹೆಗ್ಗನಹಳ್ಳಿ ವಾರ್ಡ್ ಬಿಜೆಪಿ ಮಾಜಿ ಅಧ್ಯಕ್ಷ ಕಣ್ಣಪ್ಪ, ಹೆಗ್ಗನಹಳ್ಳಿ ವಾರ್ಡ್ ನ ಜೆಡಿಎಸ್ ಮುಖಂಡರಾದ ಬೆನಕ ಲೋಕೇಶ್ ಗೌಡು, ಕರುನಾಡು ಹಿತರಕ್ಷಣಾ ಸೇವಾ ಸಂಘದ ಅಧ್ಯಕ್ಷರಾದ ಬಿ.ಪಿ ಲಕ್ಷ್ಮಣ್, ಗೌರವಾಧ್ಯಕ್ಷರಾದ ರಂಗಸ್ವಾಮಯ್ಯ, ಪ್ರಧಾನ ಕಾರ್ಯದರ್ಶಿ ರಾಜಕುಮಾರ್, ಖಜಾಂಚಿ ಎಸ್ ನಾಗರಾಜು, ಉಪಾಧ್ಯಕ್ಷರಾದ ಶಾರದಾ, ಜಂಟಿ ಕಾರ್ಯದರ್ಶಿ ರವೀಂದ್ರರಾವ್, ಸಂಘಟನಾ ಕಾರ್ಯದರ್ಶಿ ರಾಜು, ಕರುನಾಡ ಹಿತರಕ್ಷಣಾ ಸೇವಾ ಸಂಘದ ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರುಗಳಾದ ಆರ್.ಕೆ. ಕುಮಾರ್, ಗೋವಿಂದರಾಜು, ಎನ್ ರಮೇಶ್ ಗೌಡ್ರು, ಮಂಜುನಾಥ್ ಎಂ. ರಂಗನಾಥ್ ಎಂ. ಮದನ್ ಕುಮಾರ್, ದಬ್ಬಗುಳಿ ರಮೇಶ್ ಎನ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!