
ಪಬ್ಲಿಕ್ ರೈಡ್ ಪೀಣ್ಯ ದಾಸರಹಳ್ಳಿ,: ರಾಜಗೋಪಾಲನಗರದ ಅರಳಿ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವದ ಪೂಜೆ ಹಾಗೂ ಕಸ್ತೂರಿ ಕನ್ನಡ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾಜಿ ಬಿಬಿಎಂಪಿ ನಾಮನಿರ್ದೇಶಕ ಸದಸ್ಯರಾದ ಜೆ ವಿ ಶ್ರೀನಿವಾಸ್, ಸಹಾಯ ಹಸ್ತ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರುದ್ರೇಗೌಡ್ರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಸೋಮಣ್ಣ, ದಾರಿದೀಪ ಮಂಜು ಚಂದ್ರು ಸೇರಿದಂತೆ ರಾಜಗೋಪಾಲನಗರ ವಾರ್ಡ್ ನ ಕಾಂಗ್ರೆಸ್ ಮುಖಂಡರು. ಸಂಘದ ಪದಾಧಿಕಾರಿಗಳು, ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.