
ಹುಬ್ಬಳ್ಳಿ
ಮಹಾರಾಷ್ಟ್ರ 2024 ರ ಸಾರ್ವತ್ರಿಕ ಚುನಾವಣೆ ಕಾವು ಈಗ ದಿನಕಳೆದಂರೆ ರಂಗು ಪಡೆದುಕೊಳ್ಳುತ್ತಿದ್ದು, ತುಳಾಜಾಪುರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಣಾ ಪರ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅಬ್ಬರದ ಚುನಾವಣೆ ಪ್ರಚಾರ ನಡೆಸಿದರು.
ಮಹಾರಾಷ್ಟ್ರ ತುಳಾಜಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದಲ್ಲಿರುವ ಕರ್ನಾಟಕದ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ, ತುಳಜಾಪುರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಣಾ ಜಗಜಿತಸಿಂಹ ಪಾಟೀಲ್ ಪರ ಚುನಾವಣೆ ಪ್ರಚಾರ ಕೂಗೊಂಡು ಬಿಜೆಪಿ ಪ್ರಮುಖರ ಸಭೆ ನಡೆಸಿದರು. ತುಳಜಾಪುರ ಕ್ಷೇತ್ರ ವ್ಯಾಪ್ತಿಯ ಹಂಗರಗಾ( ನಳ್) ಮತದಾರರೊಂದಿಗೆ ಚುನಾವಣೆ ಪ್ರಚಾರ ಬಡೆಸಿದ ಶಾಸಕ ಟೆಂಗಿನಕಾಯಿ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಜನ ಪರ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ ಮತಯಾಚನೆ ಮಾಡಿದರು. ಇನ್ನೂ ಬಿಜೆಪಿ ಶಾಸಕ ಪಕ್ಷದ ನಿಷ್ಠಾವಂತ ನಾಯಕನಾಗಿದ್ದು, ಕ್ಷೇತ್ರದ ಜನತೆ ಜವಾಬ್ದಾರಿ ಸೈ, ಪಕ್ಷದ ಜವಾಬ್ದಾರಿಗೂ ಸೈ ಎನಿಸಿಕೊಳ್ಳುವ ಮೂಲಕ ಈಗ ಮಹಾರಾಷ್ಟ್ರ ಸಾರ್ವತ್ರಿಕ ಚುನಾವಣೆಯ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ.