
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಜಿ ಕೆ ವಿ ಕೆ ಕುಕ್ಕಟ ಉದ್ಯಮದಲ್ಲಿ ಉನ್ನತ ತಂತ್ರಜ್ಞಾನ ಬಳಸಿದರೆ ಕೋಳಿಗಳನ್ನು ಬೆಳಸಲು ಸಹಕಾರಿಯಾಗಲಿದೆ. ಎಂದು ರಾಯಲ್ ಪೌಲ್ಟ್ರಿ ಇಕ್ವಿಪ್ ಮೆಂಟ್ ಮಾಲೀಕರಾದ ಅರ್ಜುನ್ ಹಾಗೂ ಚಂದ್ರು ಅಭಿಪ್ರಾಯ ಪಟ್ಟರು.
ಜಿಕೆವಿಕೆ ಅವರಣದಲ್ಲಿ ಅಯೋಜಿಸಲಾಗಿರುವ ಕೃಷಿಮೇಳದಲ್ಲಿ ಕುಕ್ಕಟ ಉದ್ಯಮದಲ್ಲಿ ಉದ್ಯಮಿಗಳಿಗೆ ಇಕ್ವಿಪ್ ಮೆಂಟ್ ಗಳ ಪರಿಚಯ ಹಾಗೂ ಮಾರ್ಗದರ್ಶನ ಅಯೋಜಿಸಲಾಗಿತ್ತು.
ರೈತರು ತಂತ್ರಜ್ಞಾನ ಬಳಸಿ ಕೋಳಿ ಸಾಕಾಣಿಕೆ ಮಾಡಲು ಮುಂದಾಗಬೇಕು,ತಂತ್ರಜ್ಞಾನ ಬಳಸಿದರೆಕಾರ್ಮಿಕರು ಕೂಡ ಹೆಚ್ಚಿಗೆ ಬೇಕಾಗಿಲ್ಲ ,ಕೋಳಿಗಳನ್ನು ಕೂಡ ಉತ್ತಮವಾಗಿ ಬೆಳೆಯಬಹುದಾಗಿದೆ ಎಂದರು.
ಮೇಳದಲ್ಲಿ ನಮ್ಮ ಕಂಪನಿ ಯಾದ ರಾಯಲ್ ಪೌಲ್ಟ್ರಿ ಇಕ್ವಿಪ್ ಮೆಂಟ್ ಮಳಿಗೆಯಿದ್ದು ಉದ್ಯಮೆದಾರರಿಗೆ ಅದರ ಪರಿಚಯ ಹಾಗೂ ಮಾರ್ಗದರ್ಶನ ನೀಡುತ್ತಿದ್ದೆವೆ ಅವರ ಪೌಲ್ಟ್ರಿ ಫಾರಂ ಗೆ ಹೋಗಿ ನಾವೇ ಸ್ವತಃ ತಂತ್ರಜ್ಞಾನ ಅಳವಡಿಸಿಕೊಡುತ್ತೆವೆ ಎಂದರು.
ರಾಯಲ್ ಪೌಲ್ಟ್ರಿ ಇಕ್ವಿಪ್ ಮೆಂಟ್ ಮಳಿಗೆಗೆ ಉತ್ತರ ಕರ್ನಾಟಕ, ಹಾಗೂ ಇತರೆಡೆಗಳಿಂದ ಅಗಮಿಸಿ ಮಾಹಿತಿಗಾಗಿ ಉದ್ಯಮೆದಾರರು ಕಿಕ್ಕಿರಿದು ತುಂಬಿದ್ದರು.