
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ಪೀಣ್ಯ 2ನೇ ಹಂತ ಸಮೀಪದ ಹೆಗ್ಗನಹಳ್ಳಿ ಮುಖ್ಯರಸ್ತೆಯ ಡೈರಿ ಬಸ್ ಸ್ಟಾಪ್ ನಲ್ಲಿರುವ ಡಾ. ಬಿ.ಎಂ ಬಳ್ಳಾರಿಯವರ ವೇದಾಮೃತ ಹಾಸ್ಪಿಟಲ್ ನಲ್ಲಿ ಉಚಿತ ಬಿಪಿ ಹಾಗೂ ಶುಗರ್ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ವೇದಾಮೃತ ಹಾಸ್ಪಿಟಲ್ ನ ಮಾಲೀಕರಾದ ಡಾ ಬಿ.ಎಂ ಬಳ್ಳಾರಿ, ‘ಮಧುಮೇಹ, ರಕ್ತದೊತ್ತಡ ನಮ್ಮ ಜೀವನ ಶೈಲಿಯಿಂದ ಬರುವ ಕಾಯಿಲೆಗಳಾಗಿವೆ. ಜೀವನ ಶೈಲಿಯನ್ನು ಬದಲಾಯಿಸಿಕೊಂಡಾಗ ಮಾತ್ರ ಇವು ಹತೋಟಿಗೆ ಬರುತ್ತದೆ. ಆರೋಗ್ಯವು ನಮ್ಮ ಕೈಯಲ್ಲೇ ಇದೆ. ಅದನ್ನು ನಾವು ಗುರುತಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು’, ಎಂದು ಹೇಳಿದರು.
ಇದೇ ವೇಳೆ ಬಿ.ಪಿ ಹಾಗೂ ಶುಗರ್ ಇರುವವರಿಗೆ ಉಚಿತವಾಗಿ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬ್ಲೂ ಕ್ರಾಸ್ ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್ ನ ಪ್ರಾದೇಶಿಕ ವ್ಯವಸ್ಥಾಪಕರಾದ ಅಂಜನ್ ಜಾನ ಸೇರಿದಂತೆ ಹಾಸ್ಪಿಟಲ್ ನ ಸಿಬ್ಬಂದಿ ವರ್ಗ, ಸಾರ್ವಜನಿಕರು ಉಪಸ್ಥಿತರಿದ್ದರು.