
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ
ಬೆಂಗಳೂರು ನಗರವನ್ನು ಸ್ವಚ್ಛ ಮಾಡಿ ಸುಂದರವಾಗಿ ಕಾಣು ವಂತೆ ಮಾಡುವುದಕ್ಕೆ ಪೌರಕಾರ್ಮಿಕರು ಹಗಲು ಇರುಳು ಎನ್ನದೆ ದುಡಿಯುತ್ತಿದ್ದಾರೆ ಅವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಪೌರಕಾರ್ಮಿಕರ ಶ್ರಮ ಗುರುತಿಸಿ ಬಿ ಕ್ಲಿಪ್ ಸಂಸ್ಥೆ ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿ ವಿತರಣೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಹಮ್ಮಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಬಿ ಪ್ಯಾಕ್ ಪ್ರತಿನಿಧಿ ಉಮೇಶ್ ಬೋರಗೌಡ ಹೇಳಿದರು.
ಹೆಗ್ಗನಹಳ್ಳಿ ವಾರ್ಡಿನ ಪೌರಕಾರ್ಮಿಕರಿಗೆ ಹಾಗೂ ಘನ ತ್ಯಾಜ್ಯ ಸಾಗಿಸುವ ಆಟೋ ಹಾಗೂ ಟಿಪ್ಪರ್ ಕಾರ್ಮಿಕರಿಗೆ ಬಿ ಪ್ಯಾಕ್ ಪ್ರತಿನಿಧಿ ಉಮೇಶ್ ಬೋರೇಗೌಡ ನೇತೃತ್ವದಲ್ಲಿ ಸ್ವೀಟ್ ಬಾಕ್ಸನ್ನು ವಿತರಿಸಲಾಯಿತು ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮೂಜುಂದಾರ್ ರವರ ದೂರದೃಷ್ಟಿ ಸಹಕಾರದಿಂದ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರುವ ಉದ್ದೇಶದಿಂದ ದೀಪಾವಳಿ ಹಬ್ಬಕ್ಕೆ ಸ್ವೀಟ್ ಬಾಕ್ಸ್ ಗಳನ್ನು ಉಡುಗೊರೆಯಾಗಿ ನೀಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಗ್ಗನಹಳ್ಳಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಜೆ ಕೆ .ಪ್ರಕಾಶ್ ಕರುನಾಡು ವಿಜಯ ಸೇನೆ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ವಾಸುದೇವ ಎಸ್ ಪ್ರಧಾನ ಕಾರ್ಯದರ್ಶಿ ಜಗದೀಶ್ ಹೆಗ್ಗನಹಳ್ಳಿ ವಾರ್ಡ್ ಹೆಲ್ತ್ ಇನ್ಸ್ಪೆಕ್ಟರ್ ರಮೇಶ್ ಯುವ ಮುಖಂಡರಾದ ರೋಹನ್ ಮಂಜುನಾಥ್ ವಿನಯ್ ನೂರಾರು ಸಂಖ್ಯೆಯಲ್ಲಿ ಪೌರಕಾರ್ಮಿಕರು ಉಪಸ್ಥಿತರಿದ್ದರು.