
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ಪೀಣ್ಯ 2ನೇ ಹಂತ ಸಮೀಪದ ರಾಮಮಂದಿರ ಪಕ್ಕದ ಸರ್ಕಸ್ ಗ್ರೌಂಡ್ (ಮುನಿಗಂಗಪ್ಪ ಮೈದಾನ) ನಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಮೊಟ್ಟಮೊದಲ ಬಾರಿಗೆ ಹಮ್ಮಿಕೊಂಡಿರುವ ಅಂಡರ್ ವಾಟರ್ ಫಿಶ್ ಟನಲ್, ಫಿಶ್ ಅಕ್ವೇರಿಯಂ ಎಕ್ಸ್ಪೋ ಅಮ್ಯೂಸ್ಮೆಂಟ್ ಮತ್ತು ವಸ್ತು ಪ್ರದರ್ಶನವನ್ನು ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಬಿ ಜಗದೀಶ್ ಕುಮಾರ್, ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ ಹನುಮಂತರಾಜು ಡಾ. ಬಿ.ಎಂ ಬಳ್ಳಾರಿ ಹಾಗೂ ಸಾಫ್ಟ್ ವೇರ್ ಇಂಜಿನಿಯರ್ ಚೈತ್ರ ಬಿ.ಆರ್ ರವರು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ರಾಜಗೋಪಾಲ್ ನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಬಿ ಜಗದೀಶ್ ಕುಮಾರ್, ‘ ಮಕ್ಕಳಿಗೆ ದಸರಾ ರಜೆ ಇರುವುದರಿಂದ ಅವರಿಗೆ ಎಂಜಾಯ್ ಮಾಡಲು ಕುಟುಂಬ ಸಮೇತ ಆಗಮಿಸಿ ಮನರಂಜನೆ ಪಡೆಯಲು ನಮ್ಮ ರಾಜಗೋಪಾಲನಗರದಲ್ಲಿ ಅಂಡರ್ ವಾಟರ್ ಫಿಶ್ ಟನಲ್ ಅಕ್ವೇರಿಯಂ ಎಕ್ಸ್ಪೋ ಆಯೋಜಿಸಿರುವುದು ತುಂಬಾ ಖುಷಿಯ ವಿಚಾರ. ನಮ್ಮ ಈ ಭಾಗದ ಜನ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು’, ಎಂದು ಹೇಳಿದರು.
ನಂತರ ಮಾತನಾಡಿದ ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ ಹನುಮಂತರಾಜು, ‘ ಯಾಂತ್ರಿಕ ಬದುಕಿನಲ್ಲಿ ಮುಳುಗಿ ಹೋಗಿರುವ ಜನರಿಗೆ ರೆಫ್ರೆಶ್ ಮೆಂಟ್ ತುಂಬಾ ಅವಶ್ಯಕ. ಅದರಿಂದ ಮನಸ್ಸನ್ನು ಹಗುರ ಮಾಡಲು ಇಂತಹ ಎಕ್ಸ್ ಪೊಗಳು ಸಹಕಾರಿಯಾಗುತ್ತವೆ. ಹಾಗೆಯೇ ಮಕ್ಕಳಿಗೆ ದಸರಾ ರಜೆಯನ್ನು ಮಜಾ ಮಾಡಲು ಉತ್ತಮ ಅವಕಾಶ’, ಎಂದು ಹೇಳಿದರು.
ಡಾ ಬಿ.ಎಂ ಬಳ್ಳಾರಿ ಮಾತನಾಡಿ, ‘ಮನರಂಜನೆಯು ಜನರ ಆರೋಗ್ಯದ ವಿಚಾರದಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳೊಂದಿಗೆ ಹಾಗೂ ಸ್ನೇಹಿತರೊಂದಿಗೆ ಇಲ್ಲಿಗೆ ಬಂದು ಎಂಜಾಯ್ ಮಾಡುವುದರಿಂದ ಕೆಲಸದ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಉಲ್ಲಾಸ ಬರುತ್ತದೆ. ಇಂತಹ ಅಮ್ಮ್ಯೂಸ್ಮೆಂಟ್ ಗಳು ಹೆಚ್ಚು ಹೆಚ್ಚು ನಡೆಯಬೇಕು’, ಎಂದು ತಿಳಿಸಿದರು.
ನವೀನ್ ಕುಮಾರ್ ರವರ ನೇತೃತ್ವದಲ್ಲಿ ಮುತ್ತುಕುಮಾರ್, ಕನ್ನಿ ಮೋಳಿ, ರಾಜೇಂದ್ರ, ಚಂದ್ರನ್ ರವರ ಸಹಕಾರದೊಂದಿಗೆ ಆಯೋಜಿಸಿರುವ ಈ ಅಮ್ಯೂಸ್ ಮೆಂಟ್ ಮತ್ತು ವಸ್ತು ಪ್ರದರ್ಶನದಲ್ಲಿ ವಿವಿಧ ಬಗೆಯ ಮೀನುಗಳನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ. ಹಾಗೆಯೇ ಡ್ರ್ಯಾಗನ್ ಟ್ರೈನ್, ಬ್ರೇಕ್ ಡ್ಯಾನ್ಸ್, ಜಾಯಿಂಟ್ ವೀಲ್ಸ್, ಕೊಳಂಬಸ್, ವಾಟರ್ ಬೋಟ್, ಮಹಾರಾಜ ಟ್ರೈನ್, ಬೋನ್ಸಿ, ಮಕ್ಕಳಿಗೆ ಹೆಲಿಕಾಪ್ಟರ್, ಬೈಕ್, ಡೂಮ್ ಬೈಕ್, ಕಾರ್ ಸೇರಿದಂತೆ ಹಲವಾರು ಗೇಮ್ ಗಳು ಜನರನ್ನು ಆಕರ್ಷಿಸುತ್ತಿವೆ. ಆಟ ಆಡಿ ನೆಚ್ಚಿನ ಆಹಾರಗಳನ್ನು ಸವಿಯಲು ಫುಡ್ ಸ್ಟಾಲ್ ಗಳು ಇವೆ.
ಇದೇ ವೇಳೆ ಗಣ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಟಿಎಂ ಲೇಔಟ್ ರಾಜು, ಮೋಹನ್, ಕಿಶೋರ್, ಗಿರಿ, ನಾರಾಯಣ್ ಸೇರಿದಂತೆ ಹಲವಾರು ಗಣ್ಯರು, ಸ್ಥಳೀಯರು, ಸಾರ್ವಜನಿಕರು ಉಪಸ್ಥಿತರಿದ್ದರು.