
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ಕೆಬಿಸಿ ಟ್ರಸ್ಟ್ ವತಿಯಿಂದ ಮಾಜಿ ನಗರ ಸಭಾ ಅಧ್ಯಕ್ಷರು ಹಾಗೂ ಕೆಬಿಸಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಕೆ.ಸಿ.ಅಶೋಕ್ ರವರ ಹುಟ್ಟು ಹಬ್ಬದ ಪ್ರಯುಕ್ತ ಅಶೋಕ ಗ್ರೂಪ್ ಆಫ್ ಇನ್ಸಿಟ್ಯೂಷನ್ ಆವರಣದಲ್ಲಿ 29ನೇ ವರ್ಷದ ಬೃಹತ್ ಆರೋಗ್ಯ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಮಾತನಾಡಿದ ಕೆಸಿ ಆಶೋಕ್ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳುವುದು ಎಲ್ಲರಿಗೂ ಆಗತ್ಯವಾಗಿದ್ದು, ಕಾಲ ಕಾಲಕ್ಕೆ ಸೂಕ್ತವಾದ ತಪಾಸಣೆ ಮಾಡಿಕೊಂಡಾಗ ಪ್ರಾಥಮಿಕ ಹಂತದಲ್ಲಿಯೇ ಆರೋಗ್ಯದ ಗುಣಲಕ್ಷಣಗಳನ್ನು ಪತ್ತೆ ಹಚ್ಚಬಹುದಾಗಿದೆ. ಹಾಗಾಗಿ ಸಾಮಾನ್ಯ ಜನರ ಆರೋಗ್ಯ ಸುಧಾರಣೆಯ ಹಿತ ದೃಷ್ಟಿಯಿಂದ ನಮ್ಮ ಕೆಬಿಸಿ ಟ್ರಸ್ಟ್ ವತಿಯಿಂದ ಪ್ರತಿ ವರ್ಷವೂ ಉಚಿತವಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.ಈ ಆರೋಗ್ಯ ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆ. ಕಿವಿ ಮೂಗು, ಕಣ್
ತಪಾಸಣೆ, ಗಂಟಲು, ಹೃದಯ ರೋಗ, ಕಿಡ್ನಿ ತಪಾಸಣೆ, ಚರ್ಮರೋಗ, ಡಯಾಲಿಸಿಸ್ ಕ್ಯಾನ್ಸರ್ ಸೇರಿದಂತೆ ಇನ್ನೂ ಹಲವಾರು ಖಾಯಿಲೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿ ಅವಶ್ಯಕತೆ ಇರುವವರಿಗೆ ವೈದ್ಯರ ಶಿಫಾರಸ್ಸಿನ ಮೇರೆಗೆ ಶಸ್ತ್ರಚಿಕಿತ್ಸೆ ಕಳಿಸಲಾಯಿತು. ಸ್ಥಳದಲ್ಲೇ ಔಷಧಿ ಮತ್ತು ಕನ್ನಡಕ
ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ
, ಚಲನಚಿತ್ರ ಹಾಸ್ಯನಟ ಸರಿಗಮ ವಿಜಿ, ರೋಷನ್ ಅಶೋಕ್, ದಕ್ಷಿಣ ಬೆಂಗಳೂರು ರೋಟರಿ ಡಾ. ಶ್ಯಾಮ್ ಸುಂದರ್, ಡಾ. ಲಿಂಗರಾಜು,ಎಬಿಬಿ ಮಂಜಣ್ಣ, ಭಾಸ್ಕರ್ ಆಚಾರಿ ಸುರೇಶ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.