
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ‘ದಾಸರಹಳ್ಳಿ ಕ್ಷೇತ್ರದಲ್ಲಿ ನನ್ನಿಂದ ಅಭಿವೃದ್ಧಿಯಾಗಿದೆಯೇ ಹೊರತು ಆ ವ್ಯಕ್ತಿಯಿಂದಲ್ಲ’, ಎಂದು ಪರೋಕ್ಷವಾಗಿ ಮಾಜಿ ಶಾಸಕ ಆರ್ ಮಂಜುನಾಥ್ ವಿರುದ್ಧ ಶಾಸಕ ಎಸ್ ಮುನಿರಾಜು ಹರಿಹಾಯ್ದರು.
ರಾಜಗೋಪಾಲನಗರ ವಾರ್ಡ್ ನ ದೊಡ್ಡಣ್ಣ ಕೈಗಾರಿಕಾ ಪ್ರದೇಶದಲ್ಲಿ ಮೋರಿ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ತುಂಬಾ ಹಿಂದುಳಿದ ಕ್ಷೇತ್ರಗಳಲ್ಲಿ ಒಂದಾಗಿದ್ದ ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ನಾನು ಸತತವಾಗಿ ಶ್ರಮಿಸುತ್ತಿದ್ದೇನೆ. ಅನುದಾನದ ಕೊರತೆಯಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ’, ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜಗೋಪಾಲನಗರ ವಾರ್ಡ್ ಮಾಜಿ ಬಿಬಿಎಂಪಿ ಸದಸ್ಯರಾದ ಹೆಚ್.ಎನ್ ಗಂಗಾಧರ್, ತಿಮ್ಮನಂಜಯ್ಯ, ರಾಜಗೋಪಾಲನಗರ ವಾರ್ಡ್ ಅಧ್ಯಕ್ಷ ನರಸಿಂಹಮೂರ್ತಿ(ಮಂಗಳ ವಾಟರ್). ಬಿಜೆಪಿ ಮುಖಂಡರಾದ ದಿನೇಶ್, ರಾಜಗೋಪಾಲನಗರ ವಾರ್ಡ್ ಮಾಜಿ ಬಿಜೆಪಿ ಅಧ್ಯಕ್ಷ ನಾಗೇಶ್, ಆರ್.ಸಿ ಹರೀಶ್, ವೈ.ಜಿ ನಾಗರಾಜ್, ವೆಂಕಟೇಶ್, ಮಹಿಳಾ ಮುಖಂಡರಾದ ಸೌಭಾಗ್ಯಮ್ಮ, ರತ್ನಮ್ಮ, ಬಿಬಿಎಂಪಿ ಎಇಇ ನರಸಿಂಹಮೂರ್ತಿ, ಸಹಾಯಕ ಇಂಜಿನಿಯರ್ ಅಕ್ಷಯ್ ಪಾಟೀಲ್, ಬೆನಕ ಡೆನಲಪರ್ಸ್ ನ ಡಿ ನರಹರಿ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.