
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ :ಬಾಗಲಗುಂಟೆಯಲ್ಲಿ ಆಯೋಜಿಸಿದ್ದ ಗಣೇಶೋತ್ಸವದಲ್ಲಿ ಗಣಪನ ಪ್ರಸಾದ 25 ಕೆ.ಜಿ. ಲಡ್ಡು ಅನ್ನು ಚಿಕ್ಕಸಂದ್ರ ಮೋಹನ್ 4.50 ಲಕ್ಷ ರೂ.ಗೆ ಖರೀದಿಸಿದರು.
ಬಾಗಲಗುಂಟೆ ಎಂಇಐ ಆಟದ ಮೈದಾನದಲ್ಲಿ ಆಯೋಜಿಸಿದ್ದ ದಾಸರ ಹಳ್ಳಿ ಗಣೇಶೋತ್ಸವದಲ್ಲಿ » ಗಣಪನ ಪ್ರಸಾದ 25 ಕೆ.ಜಿ. ಲಡ್ಡುವನ್ನು ಹರಾಜಿನಲ್ಲಿ ಬಿಜೆಪಿ ಮುಖಂಡ ಚಿಕ್ಕಸಂದ್ರ ಮೋಹನ್ ಕುಮಾರ್ 4.50 ಲಕ್ಷ ರೂ.ಗೆ ಖರೀದಿಸಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಎಸ್. ಮುನಿರಾಜು ಲಡ್ಡುವನ್ನು ಹಸ್ತಾಂತರಿಸಿದರು. ಎಸ್. ಮುನಿರಾಜು ಮಾತನಾಡಿ, ಕಳೆದ ವರ್ಷ ಗಣೇಶನ ಪ್ರಸಾದವನ್ನು ರಿಯಲ್ ಎಸ್ಟೇಟ್ ಉದ್ಯಮಿ ಲಕ್ಷ್ಮಣ್ ಗೌಡ 4.25 ಲಕ್ಷ ರೂ.ಗೆ ಹರಾಜಿನಲ್ಲಿ ಪಡೆದಿದ್ದರು. ಈಗ ಮೋಹನ್ ಖರೀದಿಸಿದ್ದಾರೆ.
ಹೀಗೆ ಸಂಗ್ರಹವಾದ ಬಾಗಲಗುಂಟೆ ಹಣವನ್ನು ಮುಂದಿನ ಗಣೇಶೋತ್ಸವ ಕ್ಕಾಗಿ ಬಳಸಿಕೊಳ್ಳ ಲಾಗುವುದು ಎಂದರು. ಉತ್ಸವದಲ್ಲಿ ಸೂರಜ್ ಫೌಂಡೇಶನ್ ಸಂಸ್ಥಾಪಕಿ ಸುಜಾತಾ ಮುನಿರಾಜು ನೇತೃತ್ವದಲ್ಲಿ ಎಮ್ ಇ ಐ ಮೈದಾನದಲ್ಲಿ ಮಹಿಳೆಯರಿಗೆ ರಂಗೋಲಿ, ಗಾಯನ, ನೃತ್ಯ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾಠ್ಯಕ್ರಮ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.’ಗಿಚ್ಚಿ ಗಿಲಿಗಿಲಿ’ರಾಘವೇಂದ್ರ ಕಾಮಿಡಿ ಶೋ, ರಘು ದೀಕ್ಷಿತ್ ಸಂಗೀತ ರಸಸಂಜೆ ಜನಮನ ರಂಜಿಸಿತು.