
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ಬೆಂಗಳೂರು ಜಲಮಂಡಳಿ ಎನ್.ಡಬ್ಲ್ಯೂ-2 ಉಪ ವಿಭಾಗ ಪೀಣ್ಯ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಹೆಚ್.ಪಿ ತೇಜಸ್ ರವರ ನೇತೃತ್ವದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವ ಮೂಲಕ 2ನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಛೇರಿಯ ಎಲ್ಲಾ ಸಿಬ್ಬಂದಿಗಳೂ ಸೇರಿ ಕಛೇರಿಯಲ್ಲಿ ಹಬ್ಬದ ವಾತಾವರಣ ಸೃಷ್ಠಿ ಮಾಡಿ ಬಹಳ ವಿಜೃಂಭಣೆಯಿಂದ ಹಾಗೂ ಶ್ರದ್ಧಾ ಭಕ್ತಿಯಿಂದ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಮಾಡಿ, ಪಟಾಕಿ ಸಿಡಿಸಿ ನೃತ್ಯದೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ತೆರಳಿ ವಿಸರ್ಜನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಅಭಿಯಂತರರಾದ ಸಂದೀಪ್, ಗಣೇಶ್, ಮ್ಯಾನೇಜರ್ ಕಲ್ಪನಾ, ಹಿರಿಯ ಜಲ ಪರಿವೀಕ್ಷಕರಾದ ಎಂ.ಎಚ್ ಚೌಡಪ್ಪ, ಜಲಪರೀಕ್ಷಕರಾದ ಮಹೇಶ್, ಸ್ವಪ್ನ, ಮಧು, ಪ್ರತಾಪ್, ಸಿದ್ದೇಶ್ ಭಾರ್ಗವ್, ಪರಮೇಶ್ವರಪ್ಪ, ರಾಜ ಕೆ, ಗುತ್ತಿಗೆದಾರರಾದ ಉಮೇಶ್, ಚಂದ್ರಪ್ಪ, ರಾಜೀವ್, ಮಂಜುನಾಥ್ ಸೇರಿದಂತೆ ಸಿಬ್ಬಂದಿ ವರ್ಗದವರು, ಜಲ ಪರೀಕ್ಷಕ ಓದುಗರು, ನೀರಗಂಟಿಗಳು, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.