
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ಹೆಗ್ಗನಹಳ್ಳಿ :ಹಿಂದುಗಳ ಪವಿತ್ರ ದೊಡ್ಡ ಹಬ್ಬಗಳಲ್ಲಿ ಗೌರಿ ಗಣೇಶ ಹಬ್ಬವು ಒಂದು ಗಣೇಶ ಚತುರ್ಥಿಯನ್ನು ಭಕ್ತಿಯಿಂದ ಪುಟ್ಟ ಮಕ್ಕಳಿಂದ ದೊಡ್ಡವರ ತನಕ ವಯಸ್ಸಿನ ತಾರತಮ್ಯವಿಲ್ಲದೆ ಎಲ್ಲರೂ ಒಟ್ಟುಗೂಡಿ ಬಹಳ ಸಡಗರದಿಂದ ಆಚರಿಸಲಾಗುತ್ತದೆ ಗೌರಿ ಗಣೇಶನನ್ನು ಕೂರಿಸಿ ಗಣೇಶನಿಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ಪಲ ಪುಷ್ಪಗಳನ್ನು ಇಟ್ಟು ಭಕ್ತಿಯಿಂದ ಪೂಜೆ ಸಲ್ಲಿಸಿ ಆಚರಿಸಲಾಗುತ್ತದೆ ಎಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಪ್ತಗಿರಿ ಆನಂದ್ ತಿಳಿಸಿದರು.
ಕರುನಾಡು ಹಿತರಕ್ಷಣ ಸೇವಾ ಸಂಘ ವತಿಯಿಂದ 17ನೇ ವರ್ಷದ ವಿಘ್ನೇಶ್ವರನ ಪ್ರತಿಷ್ಠಾಪನೆಯನ್ನು ಅಧ್ಯಕ್ಷರಾದ ಬಿಪಿ ಲಕ್ಷ್ಮಣ್ ರವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ರಂಗಸ್ವಾಮಿಯ ಪ್ರಧಾನ ಕಾರ್ಯದರ್ಶಿಯಾದ ರಾಜಕುಮಾರ್ ಬಿಆರ್ ಖಜಾಂಚಿಯಾದ ಎಸ್ ನಾಗರಾಜ್ ಜಂಟಿ ಕಾರ್ಯದರ್ಶಿಯಾದ ರವೀಂದ್ರರಾವ್ ಸಂಘಟನಾ ಕಾರ್ಯದರ್ಶಿಯಾದ ರಾಜು ಮಾಜಿ ಅಧ್ಯಕ್ಷರಾದ ಗೋವಿಂದರಾಜು ಮಾಜಿ ಉಪಾಧ್ಯಕ್ಷರಾದ ಬಿ ಕೆ ಶ್ರೀನಿವಾಸ್ ಮಾಜಿ ಜಂಟಿ ಕಾರ್ಯದರ್ಶಿ ಶ್ರೀಮತಿ ಪದ್ಮಪ್ರಿಯ ಮಾಜಿ ಖಜಾಂಚಿ ರಮೇಶ್ ದಬ್ಬುಲಿ ಇನ್ನು ಹಲವಾರು ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದ್ದರು