
ವಿಜಯ ಕರ್ನಾಟಕ ರಕ್ಷಣಾ ವೇದಿಕೆ.
ಸಾಂಸ್ಕೃತಿಕ ಘಟಕದ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿ ಜೂನಿಯರ್ ಮಾಲಾಶ್ರೀ ಖ್ಯಾತಿಯ ಮಂಜುಳ ನೇಮಕ.
ವೇದಿಕೆಯ ಸಾಂಸ್ಕೃತಿಕ ಘಟಕಕ್ಕೆ ಜೂನಿಯರ್ ಮಾಲಾಶ್ರೀ, ಮೈಸೂರು ಮಂಜುಳ. ಎಂದೇ ಹೆಸರಾದ ಅನೇಕ ಚಲನಚಿತ್ರ ಚಿತ್ರಗಳು, ಧಾರಾವಾಹಿ, ಪೌರಾಣಿಕ ನಾಟಕ, ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಟಿಸುತ್ತಿರುವ ಮಂಜುಳ.ಎಸ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ರಾಜ್ಯಾಧ್ಯಕ್ಷರಾದ ಮಹೇಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಮಂಜುಳ ಅವರು ರಾಜ್ಯಾದ್ಯಂತ ಕಲಾವಿದರನ್ನು ಗುರುತಿಸಿ ವೇದಿಕೆಯಲ್ಲಿ ಸೇರ್ಪಡೆ ಮಾಡಿ ಕಲಾವಿದರ ಕುಂದು ಕೊರತೆಗಳನ್ನು ಅರಿತು ಸರ್ಕಾರದ ಗಮನಕ್ಕೆ ತಂದು ಪರಿಹಾರ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಹಾಗೂ ಮಹಿಳೆಯರ ಪರವಾಗಿ ಸದಾ ಕಾಲ ಅವರ ಜೊತೆ ಇದ್ದು ಧೈರ್ಯ ತುಂಬಿ ಸಂಘಟನೆ ವಿಸ್ತರಿಸುವ ಕೆಲಸ ಮಾಡುವ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದ್ದಾರೆ.