
ಪಬ್ಲಿಕ್ ರೈಡ್ ಧಾರವಾಡ
ಹಿಂದೂಗಳ ಪ್ರಮುಖ ಆಚರಣೆಯಲ್ಲೊಂದಾದ ಹಾಗೂ ವಿಷ್ಟವಿನ ಎಂಟನೇ ಅವತಾರವೆಂದೆ ಕರೆಯಲ್ಪಡುವ ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ಇಂದು ನಾಡಿನಾದ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ಅದೇ ರೀತಿ ಪೇಡಾ ನಗರಿ ಧಾರವಾಡದ ಇಸ್ಕಾನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಿದೆ. ಭಕ್ತರ ದಂಡು ದೇವಸ್ಥಾನಕ್ಕೆ ಹರಿದು ಬಂದಿದ್ದು, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು.
ಹುಬ್ಬಳ್ಳಿ ಧಾರವಾಡ ಮುಖ್ಯರಸ್ತೆಯ ರಾಯಾಪೂರ ಬಳಿಯ ಇಸ್ಕಾನ್ ಟೆಂಪಲನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸೇರಿದಂತೆ ಕೃಷ್ಣನ ಭಜನೆಗಳು ಜರುಗಿದವು. ಕೃಷ್ಣನ ಜನ್ಮಾಷ್ಟಮಿ ನಿಯಮಿತ ಇಸ್ಕಾನಗೆ ಮುಂಜಾನೆದಲೇ ಭಕ್ತರ ದಂಡು ಹರಿದಿ ಬಂದಿದ್ದು, ಸರದಿ ಸಾಲಿನಲ್ಲಿ ನಿಂತು ಭಕ್ತರು ಕೃಷ್ಣ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಇನ್ನೂ ಕೆಲವು ಭಕ್ತರು ದೇವಸ್ಥಾನಕ್ಕೆ ತಮ್ಮ ಮಕ್ಕಳಿಗೆ ವಿಶೇಷ ಊಡಿಗೆ ಧರಿಸಿ ಕರೆದುಕೊಂಡು ಬಂದಿದ್ದು, ನೋಡುಗರ ಗಮನ ಸೆಳೆಯಿತು. ಭಜನೆಯಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಇಸ್ಕಾನ್ ಆಡಳಿತ ಮಂಡಳಿ ವ್ಯವಸ್ಥೆ ಮಾಡಿತ್ತು. ಹಲವು ಭಕ್ತರು ಭಜನೆಯಲ್ಲಿ ಪಾಲ್ಗೊಂಡು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾದರು.