
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ರಾಜಗೋಪಾಲನಗರ ವಾರ್ಡಿನಲ್ಲಿ ರಸ್ತೆ ಒಳ ಚರಂಡಿ ಕಾಂಕ್ರೀಟ್ ಮೋರಿ ವಿದ್ಯುತ್ ನೀರು ಸೇರಿದಂತೆ ಮುಂತಾದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಸ್.ಮುನಿರಾಜು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡಿನ ಅನ್ನಪೂರ್ಣೇಶ್ವರಿ ನಗರದ ಜಿಟಿ ರೆಸಿಡೆನ್ಸಿ ಹಾಗೂ ವೀರ ಬ್ರಹ್ಮಂದ್ರ ಮಠ ಬಳಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸದಸ್ಯ ಹೆಚ್.ಎನ್. ಗಂಗಾಧರ್, ವಾರ್ಡ್ ಅಧ್ಯಕ್ಷ ನರಸಿಂಹಮೂರ್ತಿ,ಆರ್.ಸಿ.ಹರೀಶ್, ಉದ್ಯಮಿ ಹಾಗೂ ಬಿಜೆಪಿ ಮುಖಂಡರಾದ ದಿನೇಶ್, ಬಿಜೆಪಿ ಮುಖಂಡ ನರಸಿಂಹ, ಮುಖಂಡರಾದ ಹರೀಶ್, ಶಿವಣ್ಣ, ಮಹಿಳಾ ಮುಖಂಡರಾದ ರೇಣುಕಮ್ಮ, ಸಾವಿತ್ರಮ್ಮ, ಬಿಬಿಎಂಪಿ ಸಹಾಯಕ ಕಾರ್ಯ ನಿರ್ವಾಹಕ ಅಭಿ ಅಂತರರಾದ ನರಸಿಂಹಮೂರ್ತಿ, ಸಾಯಕ ಅಭಿ ಅಂತರರಾದ ಅಕ್ಷಯ್ ಪಾಟೀಲ್ ಪ್ರವೀಣ್, ಸಹಾಯಕರಾದ ರಮೇಶ್, ಸಿದ್ದಪ್ಪ, ಪುಟ್ಟಸ್ವಾಮಿ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.