
ಧಾರವಾಡ
ಮುಡಾದಲ್ಲಿ ಸಿಎಂ ಸಿದ್ದರಾಮಯ್ಯನವರು ಪಡೆದಿರುವ ಸೈಟಗಳು ಕಾನೂನು ಬಾಹಿರವಾಗಿವೆ ಎಂಬುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರವಾಗಿದೆ. ಹಾಗಾಗಿ ಸಿಎಂ ಅವರೇ ನೈತಿಕ ಹೊಣೆಹತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪರವರು ಆಗ್ರಹಿಸಿದ್ದಾರೆ.
ಈ ಕುರಿತು ಧಾರವಾಡದ ನವಲಗುಂದದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇವತ್ತು ರಾಜ್ಯಪಾಲರು ಪ್ರಾಶುಕ‌್ಯೂಶನ್ ಗೆ ಅನುಮತಿ ಕೊಟ್ಟಿದ್ದಾರೆ. ಅವರು ನೈತಿಕತೆ ಹೊಣೆ ಹೊತ್ತು ರಾಜಿನಾಮೆ ನೀಡಿ, ತನಿಖೆಗೆ ಸಹಕಾರ ಕೊಡಬೇಕು.
ಅವರು ತಪ್ಪಿತಸ್ಥ ಅಲ್ಲ ಅನ್ನೋದು ಕಾನೂನಾತ್ಮಕವಾಗಿ ಕ್ಲಿಯರ್ ಆದ ಮೆಲೆ ಅವರು ಮತ್ತೆ ಸಿಎಂ ಆಗಲಿ, ನಾವೇನೂ ಬೇಡಾ ಅಂದಿಲ್ಲ. ಇಗಾಗಲೆ ಬೆಂಗಳೂರಿನಿಂದ ಮೈಸೂರಿನವರಗೆ ಪಾದಯಾತ್ರೆ ಮಾಡಲಾಗಿದೆ. ಸಿ ಎಂ ಅವರು ಸ್ವತಹ ವಕೀಲರು ಆಗಿದ್ದವರು, ಅವರು ಕಾನೂನಿಗೆ ತಲೆಭಾಗಬೇಕು ಎಂದು ಎಂದು ಒತ್ತಾಯಿಸಿದ್ದಾರೆ.