
ಪಬ್ಲಿಕ್ ರೈಡ್ ನ್ಯೂಸ್ ಬೆಂಗಳೂರು :ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ವೀಕ್ಷಿಸಲು ಮಹಿಳಾ ಪ್ರಾತಿನಿಧ್ಯ ಇರುವ ಕರ್ನಾಟಕದ 6 ಗ್ರಾಪಂಗಳ ಅಧ್ಯಕ್ಷರು ಹಾಗೂ ಅವರ ಕುಟುಂಬಸ್ಥರನ್ನು ವಿಶೇಷ ಅತಿಥಿಗಳಾಗಿ ಕೇಂದ್ರ ಸರ್ಕಾರ ಆಹ್ವಾನಿಸಿದೆ.
ಗೌರಿಬಿದನೂರು ತಾಲೂಕು ಗೆದರಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀನರಸಿಂಹ, ಬಂಟ್ವಾಳ ತಾಲೂಕು ಪೆರುವೈ ಗ್ರಾಪಂ ಅಧ್ಯಕ್ಷೆ ನಫೀಸಾ, ಹುಕ್ಕೇರಿ ತಾಲೂಕು ಕಮಟನೂರು ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಗುತ್ತಿ, ಕಲಬುರಗಿ ತಾಜ್ ಸುಲ್ತಾನ್‌ಪುರ ಗ್ರಾಪಂ ಸದಸ್ಯೆ ಜಯಶ್ರೀ, ಪೊನ್ನಂಪೇಟೆ ತಾಲೂಕು ಕಾನೂರು ಗ್ರಾಪಂ ಅಧ್ಯಕ್ಷೆ ಪಿ.ಟಿ. ದೇವಿ ಹಾಗೂ ಚಾಮರಾಜನಗರದ ಅಟ್ಟಗುಳಿಪುರ ಗ್ರಾಪಂ ಅಧ್ಯಕ್ಷೆ ಶಿವಮ್ಮ ಅವರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸ ಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಪಂ ಉಪಕಾಯದರ್ಶಿ ರಮೇಶ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಕುಟುಂಬವರ್ಗಕ್ಕೂ ಆಹ್ವಾನ ನೀಡಲಾಗಿದೆ.
ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಸ್ವತಂತ್ರ ದಿನಾಚರಣೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಮಹಿಳಾ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡಿದ್ದಾರೆ.
ದೆಹಲಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆರು ಜನ ಮಹಿಳಾ ಅಧ್ಯಕ್ಷರು ಸದಸ್ಯರನ್ನು ಸುರಕ್ಷಿತವಾಗಿ ಕಳೆದುಕೊಂಡು ಹೋಗಿ ಕಾರ್ಯಕ್ರಮ ನಂತರ ವಾಪಸ್ ಕರೆ ತರಲು ಪಂಚಾಯತ್ ರಾಜ್ ಇಲಾಖೆಯು ಬೆಂಗಳೂರು ಗ್ರಾಮಾಂತರ ಜಿಪಂ ಉಪ ಕಾರ್ಯದರ್ಶಿ ಟಿ.ಕೆ ರಮೇಶ್ ಅವರನ್ನು ನೋಡಲು ಅಧಿಕಾರಿಯಾಗಿ ನೇಮಕ ಮಾಡಿರುತ್ತಾರೆ.