
ಪಬ್ಲಿಕ್ ರೈಡ್ ಪೀಣ್ಯ ದಾಸರಹಳ್ಳಿ:’ ಸುಮಾರು ವರ್ಷಗಳಿಂದ ವೀರಶೈವ ರುದ್ರಭೂಮಿಗೆ ಬೇಡಿಕೆ ಇಟ್ಟಿದ್ದೆವು. ಸೋಮ ಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂಬರ್ 19ರ ಪೈಕಿ ಮೂರು ಎಕರೆ ಜಾಗ ಆದೇಶವಾಗಿದೆ. ಅದಕ್ಕೆ ಇಂದು ಸುತ್ತಲೂ ಹಸಿರು ಗಿಡಗಳು, ನಾಮಫಲಕ ಅಳವಡಿಕೆಗೆ ಚಾಲನೆ ನೀಡುತ್ತಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ ತಿಳಿಸಿದರು.
ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ವೀರಶೈವ ರುದ್ರಭೂಮಿ ಅಭಿವೃದ್ಧಿ ಟ್ರಸ್ಟ್ ಮತ್ತು ಡಾ. ಶಿವಕುಮಾರ ಸಿದ್ದಗಂಗಾ ಶ್ರೀಗಳ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಲಾದ ರುದ್ರಭೂಮಿ ನಾಮಫಲಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಭಾಗದಲ್ಲಿ ಬಿಡಿಎ ಆದ ಮೇಲೆ ಜಾಗ ಎಲ್ಲಿ ಅಂತ ಗೊತ್ತಿರಲಿಲ್ಲ ಎಂಜಿನಿಯರ್ ನಿರಂಜನ್ ಅವರು ಈ ಜಾಗ ತೋರಿಸಿ ಡಿಸಿ, ಎಸಿ ಮತ್ತು ಕೋರ್ಟ್ ಆದೇಶವಾಗಿದೆ ಎಂದರು. ಅದಕ್ಕಾಗಿ ಇಲ್ಲಿ ಬೋರ್ಡ್ ಹಾಕುತ್ತಿದ್ದೇವೆ. ಮುಂದಿನ ಸಮುದಾಯದ ಕಾರ್ಯಗಳನ್ನು ಇಲ್ಲಿ ನಡೆಸಲು ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ವೀರಶೈವ ರುದ್ರಭೂಮಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಪಿ. ಎಚ್. ರಾಜು ಮಾತನಾಡಿ’ ಶಾಸಕರಾದ ಎಸ್. ಮುನಿರಾಜು ಅವರು ಮೊದಲನೇ ಬಾರಿ ಗೆದ್ದಾಗ ಕ್ಷೇತ್ರದ ಎಲ್ಲಾ ವೀರಶೈವ ಮುಖಂಡರು ಬೇಡಿಕೆ ಇಟ್ಟಿದ್ದೆವು. ಜಾಗಕ್ಕಾಗಿ ಹೋರಾಟ ಮಾಡಿದ್ದೆವು ಆ ಸಂದರ್ಭದಲ್ಲಿ ಅವರು ಅಧಿಕಾರಿಗಳೊಂದಿಗೆ ಮಾತನಾಡಿ ಸೋಮಶೆಟ್ಟಿಹಳ್ಳಿ ಗ್ರಾಮದ 19ರ ಸರ್ವೆ ನಂಬರ್ ನಲ್ಲಿ 3 ಎಕರೆ ಜಾಗ ಮಂಜೂರು ಮಾಡಿಸಿದ್ದರು. ಆ ನಂತರ ಇಲ್ಲಿ ಸ್ವಲ್ಪ ತೊಡಕ್ಕಾಗಿತ್ತು ಮತ್ತೆ ಮುಖಂಡರ ಮೂಲಕ ಕೋರ್ಟ್ಗೆ ಅಪೀಲ್ ಹೋದಾಗ ಅಲ್ಲಿ ವೀರಶೈವ ರುದ್ರಭೂಮಿಗೆ ಆದೇಶವಾಗಿದೆ’ ಎಂದು ಮಾಹಿತಿ ನೀಡಿದರು.
ಇಲ್ಲಿ ನಾವು ಯಾರಿಗೂ ತೊಂದರೆ ನೀಡಿಲ್ಲ, ಸಮಾಜಕ್ಕೆ ಏನಾದರೂ ಸೇವೆ ನೀಡಬೇಕೆನ್ನುವ ಉದ್ದೇಶದಿಂದ ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ’ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೀರಶೈವ ರುದ್ರಭೂಮಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಪಿ ಎಚ್ ರಾಜು, ಕಾರ್ಯಾಧ್ಯಕ್ಷ ಜಿ.ಮರಿಸ್ವಾಮಿ, ಪೋಷಕ ಗೌರವ ಅಧ್ಯಕ್ಷ ಎಸ್. ಮುನಿರಾಜು, ಗೌರವ ಅಧ್ಯಕ್ಷ ಜಿ. ರಾಜೇಂದ್ರ, ವೀರಶೈವ ಮುಖಂಡರಾದ ಜಿ.ಎಲ್. ಮಲ್ಲಯ್ಯ, ಸೋಮಶೇಖರ್, ಮನೋಹರ್, ಸೋಮಶೆಟ್ಟಿಹಳ್ಳಿ ಬಸವರಾಜು, ಕುಮಾರ್ ಮುಂತಾದವರಿದ್ದರು.ವರಿದ್ದರು.