April 16, 2025

Public Ride News

ಧಾರವಾಡ: 200 ಜನರಿಗೆ ಡ್ರಗ್ ಬಗ್ಗೆ ಟೆಸ್ಟ ಮಾಡಿಸಿದರೆ ಬರೊಬ್ಬರಿ 75 ಜನರಿಗೆ ಡ್ರಗ್ ಪಾಸಿಟಿವ ಕೇಸ್ ಗಳು ಕಂಡು ಬರುತ್ತಿವೆ. ಧಾರವಾಡದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಎಲ್ಲೇಡೆ ಕಾರ್ಯಾಚರಣೆ ನಡೆಸಿ ಮಾದಕ ವಸ್ತುಗಳನ್ನು ಮಾರಾಟ ಮಾಡುವವರನ್ನು ಹಾಗೂ ಖರೀದಿ ಮಾಡುವವರನ್ನು ಪೊಲೀಸರು ಬಂಧಿಸಿ, ವೈದ್ಯಕೀಯ ಪರಿಕ್ಷೆಗೆ ಒಳ ಪಡಿಸಿದ್ದಾರೆ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಧಾರವಾಡ ನಗರದ ವಿವಿಧೆಡೆ ಪೋಲೀಸರು ದಿಢೀರ್ ದಾಳಿ ನಡೆಸಿ, ಮಾದಕ ವಸ್ತುಗಳನ್ನು ಬಳಕೆ ಮಾಡುವವರನ್ನು ಧಾರವಾಡ ಡಿಮಾನ್ಸ್ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರಿಕ್ಷೆ ನಡೆಸಿ ಮಾನಸಿಕ ರೋಗ ತಜ್ಞರಿಂದ ಕೌನ್ಸಿಲಿಂಗ್ ಸಹ ಮಾಡಿಸಿದ್ದಾರೆ ಜೊತೆಗೆ ಮಾದಕ ವಸ್ತು ಸೇವನೆ ಮಾಡಿದವರಿಗೆ ಪಾಸಿಟಿವ್ ಬಂದಿದೆ ಅಂತವರ ಮೆಲೆ ಕೇಸ್ ದಾಖಲು ಮಾಡಿದ್ದಾರೆ.

ಅದರಂತೆ ಮಾದಕ ವಸ್ತು ಸೇವನೆ ಕುರಿತು ಬಳಕೆದಾರ ಕುಟುಂಬಸ್ಥರಿಗೆ ಅವರ ಕುರಿತು ಎಚ್ಚರಿಕೆ ವಹಿಸಬೇಕು ಎಂದು ತಿಳುವಳಿಕೆ ನೀಡಿದ್ದಾರೆ ಧಾರವಾಡದ ಶಹರ ಪೊಲೀಸ್ ಠಾಣೆ, ಉಪನಗರ ಪೊಲೀಸ್ ಠಾಣೆ ಹಾಗೂ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿಢೀರ್ ದಾಳಿ ನಡೆಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸರು ಪರಿಕ್ಷೆಯಲ್ಲಿ ಓರಿಯಂಟೇಷನ್, ಪಾಸಿಟೀವ್ ಬಂದವರ ವಿರುದ್ಧ ಕಾನೂನು ಕ್ರಮವನ್ನು ಸಹ ಜರುಗಿಸಿದ್ದಾರೆ.

ಇನ್ನು ಸಾರ್ವಜನಿಕರು ಮಾದಕ ವಸ್ತುಗಳ ಬಗ್ಗೆ ಬಹಳಷ್ಟು ಮನವಿ ಮಾಡಿಕ್ಕೊಂಡಿದ್ದರು.ಅದರ ಹಿನ್ನಲೆಯಲ್ಲಿ ಒಂದು ವಾರದಿಂದ ಪೋಲಿಸ್ ಇಲಾಖೆ ಗಾಂಜಾ ಹಾಟ್ ಸ್ಪಾಟ್ ಗಳನ್ನ ಗಮನಿಸಿ ಮಾದಕ ವಸ್ತುಗಳನ್ನ ಸೇವನೆ ಮಾಡುವವರಿಗೆ ವಶಕ್ಕೆ ಪಡೆದುಕ್ಕೊಂಡು ಗಾಂಜಾ ಟೆಸ್ಟ ಮಾಡಲಾಗಿದೆ..ಪೋಲಿಸ್ ಇಲಾಖೆ ಮಾದಕ ವಸ್ತುವಳ ಮುಕ್ತ ಸಿಟಿಯನ್ನಾಗಿ ಮಾಡಲು ಪೋಲಿಸಗ ಕಮಿಷನರ್ ಎನ್ ಶಶಿಕುಮಾರ ಪಣ ತೊಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!