April 18, 2025

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ರಾಜಗೋಪಾಲನಗರ ವಾರ್ಡಿನ ರಾಜೇಶ್ವರಿನಗರದ ಸಿದ್ದಲಿಂಗಪ್ಪ ಮುಖ್ಯ ರಸ್ತೆಯಲ್ಲಿ ಮೂರನೇ ವರ್ಷದ ಅಣ್ಣಮ್ಮ ದೇವಿ ಉತ್ಸವವನ್ನು ರಾಜಗೋಪಾಲ ನಗರ ವಾರ್ಡ್ ಜೆಡಿಎಸ್ ಕಾರ್ಯದರ್ಶಿ ಮೋಹನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆರತಿಯೊಂದಿಗೆ ಅಣ್ಣಮ್ಮ ದೇವಿ ಆಗಮನ ಹಾಗೂ ಪ್ರತಿಷ್ಠಾಪಿಸಿ

9 ಗಂಟೆಗೆ ಮಹಾಮಂಗಳಾರತಿಯೊಂದಿಗೆ ಮಧ್ಯಾಹ್ನ ಒಂದು ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ 6 ಗಂಟೆಗೆ ತಮಟೆ ವಾದ್ಯಗಳೊಂದಿಗೆ ಹಾಗೂ ಡೊಳ್ಳು ಕುಣಿತ, ವೀರಗಾಸೆ ಕುಣಿತ ಹಾಗೂ ವಿವಿಧ ಕಲಾತಂಡಗಳೊಂದಿಗೆ ರಾಜೇಶ್ವರಿ ನಗರ ಹಾಗೂ ಬೈರವೇಶ್ವರ ನಗರದ ಮುಖ್ಯ ಬೀದಿ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಇದೆ ವೇಳೆ 9 ಗಂಟೆಯಿಂದ ಸಂಜೆ 5ವರೆಗೆ ಸ್ವಾಮಿ ವಿವೇಕಾನಂದ ರಕ್ತ ನಿಧಿ ಕೇಂದ್ರ ವತಿಯಿಂದ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಂದಾನಪ್ಪ, ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹಾಗೂ ಶ್ರೀರಾಮ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕರಾದ ಹನುಮಂತರಾಜು ಜಿ. ಬಿ ಟಿ ಎಂ ಲೇಔಟ್ ರಾಜು ಇವರುಗಳು ಆಗಮಿಸಿ ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಾಗೇಶ್, ಶಶಿಕುಮಾರ್, ಮಂಜುನಾಥ್, ರಾಜಣ್ಣ, ತಿಮ್ಮೇಗೌಡ, ರಾಮಣ್ಣ, ಅನಿಲ್, ಉದಯ್, ಮಂಜು, ವರ್ಸೆ, ಶಕ್ತಿ, ಬಸವರಾಜ್ ಹಾಗೂ ಚಾಲೆಂಜಿಂಗ್ ಬಾಯ್ಸ್ ಹಾಗೂ ರಾಜೇಶ್ವರಿ ನಗರದ ಜನತೆ ಮುಂತಾದವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!