
Public Ride News ಧಾರವಾಡ
ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರೊಯಾಗಿರುವ ಘಟನೆ ಧಾರವಾಡದ ಹೊರವಲಯದ ಹೆಬ್ಬಳ್ಳಿ ರಸ್ತೆಯ ಗೋವನಕೊಪ್ಪ ಕ್ರಾಸ್ ಬಳಿ ನಡೆದಿದೆ.
ಮೂವತ್ತು ವರ್ಷದ ಹರೀಶ ಶಿಂಧೆ ಎಂಬ ಯುವಕನೇ ಹತ್ಯೆಯಾದ ಯುವಕನೆಂದು ಗುರುತಿಸಲಾಗಿದೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ರಸ್ತೆಯ ಗೋವನಕೊಪ್ಪ ಕ್ರಾಸ್ ಬಳಿಯ ಖುಲ್ಲಾ ಜಾಗದಲ್ಲಿ ಈ ಯುವಕನ ಹತ್ಯೆ ನಡೆದಿದೆ.
ಕಲ್ಲಿನಿಂದ ಜಜ್ಜಿ ಹಾಗೂ ಹರಿತವಾದ ಆಯುಧದದಿಂದ ಯುವಕನ ಹತ್ಯೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹತ್ಯೆ ಮಾಡಿದವರು ಯಾರು? ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.