
Public Ride News ಧಾರವಾಡ
ಕಳೆದ ಜುಲೈ 23 ರಂದು ಧಾರವಾಡ ಹೊರವಲಯದ ಗೋವನಕೊಪ್ಪ ಬಳಿಯಲ್ಲಿನಡೆದಿದ್ದ ಟೈಲ್ಸ ಮೇಸ್ತ್ರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕೊಲೆ ಆರೋಪಿಳ ಹೆಡೆಮುರಿ ಕಟ್ಟವಲ್ಲಿ ಧಾರವಡ ಗ್ರಾಮಿಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ಹೊರವಲಯದ ಗೋವನಕೊಪ್ಪ ಬಳಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಮಧ್ಯ ರಾತ್ರಿ ಸುಮಾರಿಗೆ ಟೈಲ್ಸ್ ಮೇಸ್ತ್ರಿ ಅಗಿದ್ದ ಹರೀಶ ಶಿಂಧೆಯನ್ನು ಮಾರಕಾಸ್ತ್ರ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಬೆನ್ನುಬಿದಿದ್ದ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರಿಗೆ ಇಬ್ಬರು ಆರೋಪಿಗಳು ಸಿಕ್ಕಿಬಿದಿದ್ದಾರೆ.
ಸರ್ಫರಾಜ್ ನವಲೂರ, ಸಾಹೀಲ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರು ಹರೀಶ ಸ್ನೇಹಿತರಾಗಿದ್ದರು ಎಂದು ತಿಳಿದು ಬಂದಿದೆ.ಬಟೈಲ್ಸ್ ಕೆಲಸವನ್ನು ಮಾಡುತ್ತಿದ್ದ ಆರೋಪಿಗಳಿಗೆ ಮೃತ ಹರೀಶ್ ಸಾಲ ಕೊಟ್ಟಿದ್ದ ಎನ್ನಲಾಗಿದೆ. ಕೊಟ್ಟ ಸಾಲ ಕೇಳಿದ್ದಕ್ಕೆ ಕೊಲೆ ಮಾಡಲಾಗಿದೆ. ಹರೀಶನನ್ನು, ಧಾರವಾಡದ ಹೊರವಲಯಕ್ಕೆ ಊಟಕ್ಕೆ ಕರೆದುಕೊಂಡು ಹೋಗಿದ್ದ ಆರೋಪಿಗಳು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈಗ ಬಂಧಿತ ಇಬ್ಬರನ್ನು ಗ್ರಾಮೀಣ ಠಾಣೆಯ ಪೊಲೀಸರು ವಿಚಾರಣೆ ನಡೆಸತ್ತಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.