
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ:ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡಿನ ಕೆಂಪೇಗೌಡ ಬಡಾವಣೆಯಲ್ಲಿ ಕೆಂಪೇಗೌಡರ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನರಸಿಂಹಮೂರ್ತಿ( ಮಂಗಳ ವಾಟರ್) ನೇತೃತ್ವದಲ್ಲಿ 515ನೇ ಜಯಂತೋತ್ಸವವನ್ನು ಆಚರಿಸಲಾಯಿತು
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮಹಾಪೌರರ ಪತಿ ಹಾಗೂ ಜೆಡಿಎಸ್ ಪ್ರಭಾವಿ ಮುಖಂಡ ನರಸಿಂಹಮೂರ್ತಿ ರವರು ಮಾತನಾಡಿ ಕುಲ ಕಸಬಿಗೆ ತಕ್ಕಂತೆ 500 ವರ್ಷಗಳ ಹಿಂದೆನೇ ಪೇಟೆಗಳನ್ನು ನಿರ್ಮಿಸಿ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಟ್ಟ ಜಾತ್ಯಾತೀತ ನಾಯಕ ಕೆಂಪೇಗೌಡರು ಎಂದರೆ ತಪ್ಪಾಗಲಾರದು ಇಡೀ ಪ್ರಪಂಚದಲ್ಲೇ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಕೋಟ್ಯಂತರ ಜನರು ನೆಲೆ ಕಟ್ಟಿಕೊಳ್ಳಲಿಕ್ಕೆ ಆಸರೆಯ ತಾಣವಾಗಿದೆ ಇಲ್ಲಿ ನಮ್ಮ ರಾಜ್ಯದ ಜನರ ಜೊತೆಗೆ ಬೇರೆ ರಾಜ್ಯ ಹಾಗೂ ದೇಶದ ಜನರು ಬದುಕು ಕಟ್ಟಿಕೊಂಡು ಈ ಬೆಂಗಳೂರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎಂಬಂತ ವಾತಾವರಣ ಇಲ್ಲಿ ನಿರ್ಮಾಣವಾಗಿದೆ ಇಲ್ಲಿ ದೊರೆಯುವ ಮೂಲಭೂತ ಸೌಲಭ್ಯ ಹಾಗೂ ವಾತಾವರಣ ಬೇರೆ ಯಾವುದೇ ರಾಜ್ಯದಲ್ಲಿ ಸಿಗುವುದಿಲ್ಲ ಇಂತಹ ಬೆಂಗಳೂರನ್ನು ಕಟ್ಟಿ ಕೋಟ್ಯಾಂತರ ಜನರ ಜೀವನಕ್ಕೆ ದಾರಿ ಮಾಡಿಕೊಟ್ಟ ಕೆಂಪೇಗೌಡರಿಗೆ ನಾಡಿನ ಜನರು ಸದಾ ಸ್ಮರಣೀಯ ವಾಗಿರಬೇಕೆಂದು ತಿಳಿಸಿದರು ಈ ವೇಳೆ ಭಾಗವಹಿಸಿದ ಬಡಾವಣೆಯ ಎಲ್ಲಾ ನಾಗರಿಕರಿಗೆ ಪ್ರಸಾದವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೆಂಪೇಗೌಡ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಚೆನ್ನಕೇಶವ, ವೆಂಕಟೇಶ್, ನಾಗರಾಜ್ ಕೆ ಟಿ, ಭಾಸ್ಕರ್ ಆರ್, ಶಾಂತಕುಮಾರ್ , ಸತ್ಯನಾರಾಯಣ್, ಅಶೋಕ್ ಬಾಬು, ರಾಜೇಗೌಡ, ಬಸವರಾಜು, ವಿಠ್ಠಲ್ ಹೆಚ್ ಬಿರಾದರ್, ಶ್ರೀನಿವಾಸ್, ಮಂಜುನಾಥ್ ಗೌಡ ,ಮಹಾದೇವಯ್ಯ ,ಚಂದ್ರಶೇಖರ್, ರುದ್ರಯ್ಯ, ಕುಮಾರ್, ಮಧುಕರ್, ಎಸ್ ಕುಮಾರ್, ಕಾಳಪ್ಪ, ಜನಾರ್ಧನ್, ರಾಮೇಗೌಡ ಶಿವಕುಮಾರ್,ಮಹಿಳಾ ಮುಖಂಡರಾದ ಮಂಗಳ ನರಸಿಂಹಮೂರ್ತಿ ,ಲಕ್ಷ್ಮೀದೇವಿ ಎಂಎಸ್, ಪವಿತ್ರ, ಮಂಜುಳಮ್ಮ, ಶ್ವೇತ ,ಇನ್ನು ಮುಂತಾದ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.