
ಪಬ್ಲಿಕ್ ರೈಡ್ ನ್ಯೂಸ್ ನೆಲಮಂಗಲ:ನಾಡ ಪ್ರಭು ಕೆಂಪೇಗೌಡ ರವರ ಜನ್ಮದಿನವನ್ನು ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಮಾಡುತ್ತಿರುವುದು ನನಗೆ ಹೆಮ್ಮೆ ತರುತ್ತಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕು ಆಡಳಿತ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಬೆಂಗಳೂರಿನಂತಹ ಬೃಹತ್ ನಗರಕ್ಕೆ ತಳಪಾಯ ಹಾಕಿದ ನಾಡಪ್ರಭುಗಳ ಜಯಂತಿಯನ್ನು ಬಹಳ ಅರ್ಥಪೂರ್ಣವಾಗಿ ಅದ್ದೂರಿಯಾಗಿ ಮಾಡಿರೋದು ಸಂತಸ ತಂದಿದೆ ಕ್ಷೇತ್ರದಲ್ಲಿ ಅವರ ಹೆಸರಿನಲ್ಲಿ ಭವನ ನಿರ್ಮಾಣಕ್ಕೆ ಸರಕಾರದ ಅನುದಾನದ ಜತೆ ವೈಯಕ್ತಿಕವಾಗಿ 1 ಕೋಟಿ ರೂ. ನೀಡುತ್ತೇನೆ ಎಂದು ಎನ್ ಶ್ರೀನಿವಾಸ್ ಘೋಷಣೆ ಮಾಡಿದರು.
ನಗರದ ಪರಿವೀಕ್ಷಣ ಮಂದಿರದಿಂದ ತಾಲೂಕು ಕಚೇರಿಯವರೆಗೂ ಹಸಿರು ತೋರಣ ದಿಂದ ಅಲಂಕಾರವಾಗಿದ್ದ ರಸ್ತೆಯಲ್ಲಿ ಪೂರ್ಣಕುಂಭ ಹೊತ್ತ ನೂರಾರು ಮಹಿಳೆ ಯರು 20ಕ್ಕೂ ಹೆಚ್ಚುಕಲಾ ತಂಡಗಳು, ಸೇರಿದಂತೆ ಕೆಂಪೇಗೌಡ ಪ್ರತಿಮೆಯನ್ನು ಬೆಳ್ಳಿ ರಥಯಲ್ಲಿ ಮೆರವಣಿಗೆ ಮಾಡಲಾಯಿತು.
ಕುದುರೆ ಮೇಲೆ ಕುಳಿತ ಕೆಂಪೇಗೌಡ ವೇಷಾಧಾರಿಗಳು ಮೆರವಣಿ ಗೆಗೆ ಮೆರಗು ನೀಡಿದರು. ನೆಲಮಂಗಲ ತಾಲೂಕಿನ ಇತಿಹಾಸದಲ್ಲಿ ಪಕ್ಷಾತೀತವಾಗಿ ಎಲ್ಲಾ ಸಮುದಾಯವನ್ನು ಒಟ್ಟುಗೂಡಿಸಿಕೊಂಡು ಶಾಸಕರ ನೇತೃತ್ವದಲ್ಲಿ ನಡೆದ ಮೊದಲ ಅದ್ದೂರಿ ನಾಡಪ್ರಭು ಕೆಂಪೇಗೌಡ ಜಯಂತಿ ಇದಾಗಿತ್ತು.
ತಾಲೂಕು ಕಚೇರಿ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿದ ನಂತರ ಶಾಸಕ ಎನ್. ಶ್ರೀನಿವಾಸ್ ಮತ್ತಿತರ ಗಣ್ಯರು, ಕೆಂಪೇಗೌಡರ ಸಾಧನೆಗಳನ್ನು ಸ್ಥರಿಸಿದರು.
ಸಂದರ್ಭದಲ್ಲಿ ಸಾಹಿತಿ ಮತ್ತು ಸಂಶೋಧಕ ತಲಕಾಡು ಚಿಕ್ಕರಂಗೇಗೌಡರು, ಶಿವಾನಂದ ಆಶ್ರಮದ ಶ್ರೀ ರಮಣನಾಂದ ಸ್ವಾಮೀಜಿ,ತಹಶೀಲ್ದಾರ್ ಅಮೃತ್ ಅತ್ರೆಶ್, ಇ.ಓ.ಮಧು, ಬಿಇಒ ತಿಮ್ಮಯ್ಯ, ಡಿ.ವೈ.ಎಸ್.ಪಿ. ಜಗದೀಶ್, ಆರಕ್ಷಕ ನಿರೀಕ್ಷಕ ಶಶಿಧರ್, ಸಮಾಜ ಕಲ್ಯಾಣ ಉಪ ನಿರ್ದೇಶಕಿ ವಾಣಿ,ನಗರಸಭೆಯ ಅಧ್ಯಕ್ಷೆ ಲತಾ ಹೇಮಂತ್ ಕುಮಾರ್, ಮೊದಲಾದವರಿದ್ದರು.
ವಿಕಾಸ್ ನೆಲಮಂಗಲ ರಿಪೋರ್ಟರ್