April 19, 2025

ಪಬ್ಲಿಕ್ ರೈಡ್ ನ್ಯೂಸ್

ನೆಲಮಂಗಲ:ಮಗಳ ಪ್ರೀತಿಯ ವಿಚಾರದಲ್ಲಿ ಮನನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಂತ ಘಟನೆ ನೆಲಮಂಗಲ ನಗರದಲ್ಲಿ ನಡೆದಿದೆ.

ನಗರಸಭೆ ವ್ಯಾಪ್ತಿಗೆ ಬರುವ ನೇತಾಜಿ ಪಾರ್ಕಿನಲ್ಲಿ ರಾತ್ರಿ ಲಕ್ಷ್ಮಮ್ಮ ಎಂಬ ಮಹಿಳೆ ಪಾರ್ಕ್ ನಲ್ಲಿರುವ ಮರಕೆ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಕ್ಷ್ಮಮ್ಮ (ಅಂಜಿನಮ್ಮ) 42 ಮೃತ ದುರ್ದೇವಿ

ದೊಡ್ಡ ಆಲದ ಮರ ಚುಂಚನಕುಪ್ಪೆ ಗ್ರಾಮದ ನಿವಾಸಿಯಾದ ಲಕ್ಷ್ಮಮ್ಮ ಮದುವೆಯಾದ ನಾಲ್ಕೆ ವರ್ಷದಲ್ಲಿ ಗಂಡನನ್ನು ಕಳೆದುಕೊಂಡು ಕೂಲಿ ಕೆಲಸ ಮಾಡಿ ಒಬ್ಬಳೇ ಮಗಳಾದ ವೀಣಾ ನನ್ನು ಚೆನ್ನಾಗಿ ಓದಿಸಿ ಮನೆ ಬೆಳಗುವ ಕನಸು ಕಟ್ಟಿಕೊಂಡಿದ್ದರು.

ಬಿಕಾಂ ಮಾಡುತ್ತಿದ್ದ ವೀಣಾ ಅಮ್ಮನ ಕನಸಿಗೆ ಮಣ್ಣೆರಚಿ ಪ್ರೀತಿ ಪ್ರೇಮ ಎಂದು ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ನೆಲಮಂಗಲ ನಗರದ ಶಿವನಪುರ ಗ್ರಾಮದಲ್ಲಿ ವಾಸವಾಗಿರುವ ತಮಿಳುನಾಡಿನ ಮುನಿರಾಜು ಎಂಬ ವ್ಯಕ್ತಿಯ ಹಿಂದೆ ಬಿದ್ದು ಮನೆ ಬಿಟ್ಟು ಬಂದಿದ್ದರು.

ಮಗಳನ್ನು ಕರೆದುಕೊಂಡು ಬರಲು ಹೋದ ಲಕ್ಷ್ಮಮ್ಮನಿಗೆ ಮುನಿರಾಜ್ ಹಾಗೂ ಕುಟುಂಬದವರು ಸೇರಿ ಗಲಾಟೆ ಮಾಡಿದ್ದಾರೆ. ಮನನೊಂದ ಲಕ್ಷ್ಮಮ್ಮ ನನ್ನ ಸಾವಿಗೆ ಮುನಿರಾಜು, ಜ್ಯೋತಿ ಹಾಗೂ ಅವರ ತಾಯಿ ಕಾರಣ ನಿನ್ನ ಅಮ್ಮನ ಜೊತೆ ಹೋದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ನನ್ನ ಮಗಳಿಗೆ ಟಾರ್ಚರ್ ಕೊಡುತ್ತಿದ್ದು ನನ್ನ ಸಾವಿಗೆ ಇವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ನಗರದ ಸರ್ಕಾರಿ ಆಸ್ಪತ್ರೆ ಮುಂಭಾಗವಿರುವ ನೇತಾಜಿ ಪಾರ್ಕ್ ನಲ್ಲಿ ರಾತ್ರಿ ನೇಣಿಗೆ ಶರಣಾಗಿದ್ದಾರೆ.

ಮೃತ ಲಕ್ಷ್ಮಮ್ಮನ ಅಣ್ಣ ರಮೇಶ್ ಮಾತನಾಡಿ ಮಗಳನ್ನು ಕರೆದುಕೊಂಡು ಬರಲು ಹೋದ ನನ್ನ ತಂಗಿ ಲಕ್ಷ್ಮಮ್ಮನಿಗೆ ಮುನಿರಾಜ್ ಹಾಗೂ ಅವರ ಕುಟುಂಬದವರು ಸೇರಿ ಗಲಾಟೆ ಮಾಡಿ ಹೊಡೆದಿದ್ದಾರೆ ಈ ವಿಚಾರವನ್ನು ತಂಗಿ ಲಕ್ಷ್ಮಮ್ಮ ಫೋನ್ ಮಾಡಿ ಗಲಾಟೆಯಾದೆ ಎಲ್ಲ ವಿಚಾರವನ್ನು ತಿಳಿಸಿ ಅವರನ್ನು ಸುಮ್ಮನೆ ಬಿಡಬೇಡ ನನ್ನ ಸಾವಿಗೆ ಅವರೇ ಕಾರಣ ಎಂದು ಹೇಳಿದರು ನಾವು ಬರುವಷ್ಟರಲ್ಲಿ ಈ ಘಟನೆ ನಡೆದು ಹೋಗಿದೆ ಎಂದು ಅಳಲು ತೋಡಿಕೊಂಡರು.

ಈ ಪ್ರಕರಣ ನೆಲಮಂಗಲ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!