
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ
ಅಖಿಲ ಭಾರತೀಯ ಅಂತರ್ ವಿಶ್ವ ವಿದ್ಯಾಲಯಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಕ್ಕೆ ನಮ್ಮ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರತಿನಿಧಿಸುತ್ತಿರುವ ಏಕವಾಗಿ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆಯುವ ಪಂದ್ಯಗಳಿಗೆ ಆಯ್ಕೆಯಾಗಿ ನಮ್ಮ ಬೆಂಗಳೂರು ನಗರ ದಾಸರಹಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ನಮ್ಮ ಬೆಂಗಳೂರಿಗೆ ಹೆಮ್ಮೆಪಡುವ ಸಂಗತಿ. ಹೆಣ್ಣು ಮಕ್ಕಳು ಕ್ರೀಯಾ ಚಟುವಟಿಕೆಯಲ್ಲಿ ಭಾಗವಹಿಸುವಿಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕು, ಮಹೇಶ್ವರಿ ಜಮಾದಾರ್, ಡಿ ಆರ್ ಸಹನಾ ಮತ್ತು ಕೀರ್ತಿ ಮೂರು ಹೆಣ್ಣು ಮಕ್ಕಳು ಭಾಗವಹಿಸುವುದು ಆಶಾದಾಯಕ. ಹಾಗೆ ಸಂತಸದ ಸುದ್ದಿ ಎಂದರೆ ಹಾಯ್ ಬೆಂಗಳೂರು ಪತ್ರಿಕೆಯ ಮುಖ್ಯ ವರದಿಗಾರ ಬಸವರಾಜ್ ಜಮಾದಾರ್ ಅವರ ಮಗಳು ಮಹೇಶ್ವರಿ ಜಮಾದಾರ್ ಸಂತಸದ ಸಿಹಿ ಸುದ್ದಿ ವಿಚಾರ.
ಇತ್ತೀಚೆಗೆ ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗನಲ್ಲಿ ನಮ್ಮ ಬೆಂಗಳೂರು ಆರ್ಸಿಬಿ ತಂಡ ಈ ಬಾರಿಯ ಟ್ರೋಫಿ ಗೆದ್ದು ಹೊಸ ಇತಿಹಾಸ ಬರೆದಿದೆ .
ಈ ಸಂದರ್ಭದಲ್ಲಿ ನಮ್ಮ ಬೆಂಗಳೂರು ವಿವಿಯ ಪರವಾಗಿ ಅಂತರ್ ವಿವಿ ಮಟ್ಟದಲ್ಲಿ ಮಟ್ಟದಲ್ಲಿ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಪ್ರತಿನಿಧಿಸುತ್ತಿರುವ ಈ ಮೂರು ಆಟಗಾರ್ತಿಯರಿಗೆ ಇವರ ತರಬೇತುದಾರ ಅಭಿದಾ ಬೇಗಂ ಹಾಗೂ ಪ್ರಿನ್ಸಿಪಾಲ್ ಡಾ| ಪ್ರಸಾದ್ ಸ್ವಾಮಿ ಅಭಿನಂದನಾ ಸಲ್ಲಿಸಿರುವುದು ಒಳ್ಳೆಯ ಸಂಗತಿಯ ವಿಷಯ.