
ಪಬ್ಲಿಕ್ ರೈಡ್ ನ್ಯೂಸ್
ಪೀಣ್ಯ ದಾಸರಹಳ್ಳಿ :ಮಾಗ ಮಾಸದ ಶುಕ್ಲ ಪಕ್ಷದ ಅಮಾವಾಸ್ಯೆ ಪೂರ್ವಜರನ್ನು ಮೆಚ್ಚಿಸಲು ಈ ದಿನವನ್ನು ಅತ್ಯಂತ ಮಹತ್ವದ ದಿನವೆಂದು ಹೇಳಲಾಗುತ್ತದೆ ಮಾತೃ ಪಿತೃಗಳನ್ನು ಪೂಜಿಸಲು ಅವರ ಆಶೀರ್ವಾದ ಪಡೆಯಲು ಪವಿತ್ರ ಮಂಗಳಕರ ದಿನವಾಗಿದೆ ಈ ದಿನ ಪೂಜೆಯನ್ನು ಮಾಡಿಸುವುದರಿಂದ ಎಲ್ಲರೂ ತಮ್ಮ ಜೀವನದಲ್ಲಿ ಶಾಂತಿ ಸಮೃದ್ಧಿ ಮತ್ತು ಸಂತೋಷ ನೆಮ್ಮದಿಯನ್ನು ದೇವರು ಕರುಣಿಸುತ್ತಾನೆ ಎನ್ನುವ ಪ್ರತೀತಿ ಇದೆ ಇಂತಹ ಶುಭದಿನದಂದು ರಾಜಗೋಪಾಲ್ ನಗರ ವಾರ್ಡಿನ ಬಸಪ್ಪನ ಕಥೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಗ್ರಾಮ ದೇವತೆ ಶ್ರೀ ದುಗುಲಮ್ಮ ದೇವಸ್ಥಾನದಲ್ಲಿ ದೇವಿಗೆ ಹೂವಿನ ಅಲಂಕಾರ ಹಾಗೂ ಶಿವರಾತ್ರಿಯ ಅಮಾವಾಸ್ಯೆ ವಿಶೇಷ ಪೂಜೆಯನ್ನು ಉದ್ಯಮಿ ಹಾಗೂ ಬಿಜೆಪಿ ಮುಖಂಡ ದಿನೇಶ್ ಹಾಗೂ ಧರ್ಮ ಪತ್ನಿ ಸವಿತಾ ಕುಟುಂಬ ವರ್ಗದವರಿಂದ ವಿಶೇಷ ಪೂಜೆಯನ್ನು ಹಮ್ಮಿಕೊಂಡು ಯಶಸ್ವಿಯಾಗಿ ನೆರವೇರಿಸಿದರು. ಈ ವೇಳೆ ಪೂಜೆಗೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದದ ಜೊತೆಗೆ ಅನ್ನದಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಬಿಜೆಪಿ ನರಸಿಂಹ ಮಾಜಿ ವಾರ್ಡ್ ಅಧ್ಯಕ್ಷ ನಾಗೇಶ್ ಕಂಪ್ಯೂಟರ್ ಡಿ,ಪಿ ,ವಿಜಯ್ ರಾಧಾಕೃಷ್ಣ ಶೆಟ್ಟಿ, ಸತೀಶ್, ರಾಜೇಶ್, ಬಸವೇಗೌಡ, ಶ್ರೀನಿವಾಸ್, ಹರೀಶ್, ನಾಗರಾಜ್, ಸಾವಿತ್ರಮ್ಮ ,ಸುರಕ್ಷಣಿ, ಮಂಜುಳಾ, ರೇಣುಕಾ, ದುಗ್ಗಲಮ್ಮ ದೇವಿ ಟ್ರಸ್ಟಿನ ಪದಾಧಿಕಾರಿಗಳಾದ ರಮೇಶ್, ದೇವರಾಜ್, ಕಿರಣ್ ,ಅಂಕಪ್ಪ ,ಏಳುಮಲೈ ,ಇನ್ನು ಹಲವಾರು ಸ್ಥಳೀಯ ಮುಖಂಡರು ಹಾಗೂ ಭಕ್ತಾದಿಗಳು ಪೂಜೆಯಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.