January 29, 2026

ಹುಬ್ಬಳ್ಳಿ:ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ್ ವಿಲಾಸ್ ಕ್ರಾಸ್, ಶ್ರೀ ದುರ್ಗಾದೇವಿ ಸ್ಕೂಲ್ ದಾಜಿಬಾನಪೇಟ್ ಮತ್ತು ತಾಡಪತ್ರಿ ಗಲ್ಲಿ ಕ್ರಾಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಭಾಗವಾಗಿ ವ್ಯಾಪಕ ಜಾಗೃತಿ ಕಾರ್ಯಕ್ರಮವನ್ನು ಪೊಲೀಸರು ನಡೆಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರಿಗೆ, ವಿಶೇಷವಾಗಿ ಮೋಟಾರು ವಾಹನ ಚಾಲಕರು ಮತ್ತು ಪಾದಚಾರಿಗಳಿಗೆ ರಸ್ತೆ ಸುರಕ್ಷತಾ ನಿಯಮಗಳ ಮಹತ್ವವನ್ನು ವಿವರಿಸಿದರು. ವಾಹನ ಚಲಾವಣೆಯ ಸಮಯದಲ್ಲಿ ಸೀಟ್ ಬೆಲ್ಟ್, ಹೆಲ್ಮೆಟ್ ಬಳಕೆ, ವೇಗದ ಮಿತಿ ಪಾಲನೆ, ದಾರಿ ದಾಟುವಾಗ ಜಾಗರೂಕತೆ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸದಿರುವಂತಹ ಆರೋಗ್ಯಕರ ಅಭ್ಯಾಸಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.

 

ರಸ್ತೆ ಅಪಘಾತಗಳಿಂದಾಗುತ್ತಿರುತ್ತಿರುವ ಜೀವನ ಮತ್ತು ಆಸ್ತಿ ನಷ್ಟದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ರಮದ ಗುರಿಯಿತ್ತು. ಪ್ರತಿಯೊಬ್ಬ ನಾಗರಿಕರು ರಸ್ತೆ ನಿಯಮಗಳನ್ನು ಪಾಲಿಸುವುದರ ಮೂಲಕ ಅಪಘಾತಗಳನ್ನು ತಪ್ಪಿಸಲು ಸಹಕರಿಸಬಹುದು ಎಂಬ ಸಂದೇಶ ನೀಡಲಾಯಿತು.

ಪೊಲೀಸರು ಈ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ಮುಂದುವರೆಸಿ, ರಸ್ತೆ ಸುರಕ್ಷತಾ ಸಂಸ್ಕೃತಿಯನ್ನು ಬಲಪಡಿಸಲು ಬದ್ಧರಿದ್ದಾರೆ ಎಂದು ತಿಳಿಸಲಾಗಿದೆ. ಕಾರ್ಯಕ್ರಮದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಮತಿ ಪದ್ಮಮ್ಮ , ಮಂಜುನಾಥ ಗ್ಯಾನಪ್ಪಯ್ಯನವರ ಅವರುಗಳೇ ಮುಖ್ಯಸ್ಥರಾಗಿದ್ದರು.

Leave a Reply

Your email address will not be published. Required fields are marked *

error: Content is protected !!