ಹುಬ್ಬಳ್ಳಿ: ಜೀವಧ್ವನಿ ಸಂಸ್ಥೆಯು ನಿಖಿಲ್ ಹಂಜಗಿ ನೇತೃತ್ವದಲ್ಲಿ ಸವದತ್ತಿ ತಾಲ್ಲೂಕಿನಲ್ಲಿ ಸ್ವೆಟರ್ ವಿತರಣಾ ಸೇವಾ ಕಾರ್ಯಕ್ರಮವನ್ನು ನಡೆಸಿದೆ.

ಸವದತ್ತಿಯ ಸರಕಾರಿ ಶಾಲೆಯ ಶಿಕ್ಷಕ ಮಹೇಶ್ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಸ್ಥೆಯ ಸೇವಾ ಕಾರ್ಯಗಳನ್ನು ಗಮನಿಸಿ, ಪ್ರಸ್ತುತ ತೀವ್ರ ಚಳಿಯಿಂದ ಬಳಲುತ್ತಿರುವ ಸ್ಥಳೀಯ ಜನರು ಮತ್ತು ಮಕ್ಕಳಿಗೆ ಸ್ವೆಟರ್‌ಗಳ ಅಗತ್ಯವಿದೆ ಎಂದು ತಿಳಿಸಿದರು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಜೀವಧ್ವನಿ ಸಂಸ್ಥೆಯು ತಕ್ಷಣವೇ ಕ್ರಿಯಾಶೀಲವಾಗಿ ಸಹಾಯಕ್ಕೆ ಮುಂದಾಗಿದೆ.
ಶಿಕ್ಷಕರ ಮನವಿಗೆ ಸ್ಪಂದಿಸಿ, ಚಳಿಯಿಂದ ಬಳಲುತ್ತಿರುವವರಿಗೆ ಉಷ್ಣತೆ ಮತ್ತು ಸಂತೋಷ ತರುವ ಉದ್ದೇಶದಿಂದ ಈ ವಿತರಣೆಯನ್ನು ಏರ್ಪಡಿಸಲಾಯಿತು. ಸೇವಾ ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲಾ ಸ್ವಯಂಸೇವಕರಿಗೂ ಸಂಸ್ಥೆಯ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಲಾಗಿದೆ.
ಈ ಮಾನವೀಯ ಕಾರ್ಯವು ಸಮುದಾಯದಲ್ಲಿ ಸಾಮಾಜಿಕ ದಾಯಿತ್ವದ ಮಹತ್ವವನ್ನು ಎತ್ತಿ ತೋರಿಸುತ್ತದೆ.
