April 19, 2025

ಪಬ್ಲಿಕ್ ರೈಡ್ ನ್ಯೂಸ್ : ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ದೊಡ್ಡಬಿದರಕಲ್ ವಾರ್ಡಿನ ಅಂದ್ರಳ್ಳಿ ಗ್ರಾಮದಲ್ಲಿನ ಕರುನಾಡ ವಿಜಯ ಶ್ರೀ ಸೇನೆ, ಮಾರುತಿ ಕನ್ನಡ ಸಾಂಸ್ಕೃತಿಯ ಕ್ರೀಡಾ ಸಂಘದ ವತಿಯಿಂದ ವಿನಾಯಕ ನಗರದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಶಾಸಕ ಸೋಮಶೇಖ‌ರ್ ಗೌಡ, ಈ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಬಹಳ ತೊಂದರೆಯಾಗಿದೆಯೆಂದು ಹಾಗೂ ಬಿಬಿಎಂಪಿ ಬಜೆಟ್ಟಿನ ಸಹಾಯದೊಂದಿಗೆ ದೊಡ್ಡಬಿದರಕಲ್ಲು ವಾರ್ಡಿನ ಜನತೆಗೆ ಶೀಘ್ರದಲ್ಲೇ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ಕೆಂಪೇಗೌಡರ ಪುತ್ಥಳಿಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಶ್ರೀಗಳು ಲೋಕಾರ್ಪಣೆಗೊಳಿಸಿದರು. ಬಿಜೆಪಿ ಯುವ ಮುಖಂಡರ ಅರುಣ್ ಬೈಲಪ್ಪ. ಹಾಗೂ ಸಂಘಟನೆ ಅಧ್ಯಕ್ಷರಾದ ರಾಮಕೃಷ್ಣ, ಉಪಾಧ್ಯಕ್ಷರಾದ ಪವನ್ ಸೋಮನಹಳ್ಳಿ, ಯೋಗಾನಂದ ಹನುಮಂತೇಗೌಡ. ಸಾವಿತ್ರಿ, ಲತಾ, ಉಷಾ ವೆಂಕಟರಮಣ, ಗಂಗಾಧರ, ಮುನಿರಾಜ್ ಅನೇಕ ಕಾರ್ಯಕರ್ತರು ಸ್ಥಳೀಯ ನಾಗರಿಕರು ಕನ್ನಡ ಪರ ಹೋರಾಟಗಾರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!