ಹಿರೇಕೆರೂರು ಮುದ್ದಿನಕೊಪ್ಪ
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಾ ಮುದ್ದಿನಕೊಪ್ಪ ಗ್ರಾಮದಲ್ಲಿ ಸುಮಾರು 200 ಎಕರೆಯಲ್ಲಿ MMH 1008 ಎನ್ನುವ ಗೋವಿನ ಜೋಳ ಬೀಜವನ್ನು ಬಿತ್ತನೆ ಮಾಡಿದ್ದು ಸಂಪೂರ್ಣ ಬೇಳೆ ಪೊಂಗಲ್ ಆಗಿ ಹಾಳಾಗಿದೆ.

ಈ ಕುರಿತು ರೈತರು ನೇರವಾಗಿ ಹೊಲದಲ್ಲಿ ನಿಂತು ಹಾಳಾದ ಬೆಳೆಯ ಹೇಳಿದ್ದು ನಮಗೆ MMH 1008 ಎಂಬ ಕಂಪನಿಯವರು ಹೊಸ ತಳಿಯ ಬೀಜವೆಂದು ಹೆಚ್ಚಿನ ಹಣಕ್ಕೆ ಬೀಜ ಕೋಟು ಮೋಸ ಮಾಡಿದ್ದಾರೆ, ಈ ಕಂಪನಿಯವರು ಕೊಟ್ಟ ಬೀಜವೆಲ್ಲ ತಾಲೂಕಿನ ತುಂಬಾ ಹಾಳಾಗಿದೆ. ಈ ಸಂಬಂಧಪಟ್ಟ ಕಂಪನಿಯವರು ಹಾರಿಕೆಯ ಉತ್ತರ ನೀಡುತ್ತಿದ್ದಾರೆ.

ಮಳೆಯ ಅವಾಂತರದಿಂದ ಬೇಸತ್ತ ನಮಗೆ ಮೋಸದ ಕಂಪನಿಗಳು ಕೊಟ್ಟ ಬೀಜದಿಂದ ನಾವು ಜೀವ ಕಳೆದುಕೊಳ್ಳುವಂತಾಗಿದೆ ಎಂದು ರೈತರಾದ ರಾಮಪ್ಪ ತಳವಾರ, ಶಿವರಾಜ, ಉಮೇಶ, ಬಸವರಾಜ, ಮಂಜಪ್ಪ, ನೀಲಪ್ಪ, ಲಕ್ಷ್ಮಪ್ಪ, ಶಿವಾನಂದ ಸೇರಿದಂತೆ ನೂರಾರು ರೈತರು ಮಾಹಿತಿ ನೀಡಿದ್ದಾರೆ.
