ಕಷ್ಟಪಟ್ಟು ದುಡಿಯುವ ಮಹಿಳೆಯರಿಗೆ ಸೀರೆ ವಿತರಣೆ, ಮುಖದಲ್ಲಿ ನಗೆ
ಹುಬ್ಬಳ್ಳಿ: ದೀಪಾವಳಿ ಹಬ್ಬದ ಸಂಭ್ರಮ ಮತ್ತು ಸಾಮೂಹಿಕ ಸೇವೆಯ ಭಾವನೆಯನ್ನು ಹಂಚಿಕೊಳ್ಳುವ ಸಲುವಾಗಿ, ಜೀವ ಧ್ವನಿ ಫೌಂಡೇಶನ್ (ರಿ) ವತಿಯಿಂದ ನಗರದ ವಿವಿಧ ಪ್ರದೇಶಗಳಲ್ಲಿನ ಕಷ್ಟಪಟ್ಟು ದುಡಿಯುವ ಮಹಿಳೆಯರಿಗೆ ಹೊಸ ಸೀರೆಗಳನ್ನು ವಿತರಿಸುವ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸೇವಾ ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಸಂತೋಷ್ ಆರ್ ಶೆಟ್ಟಿ ಮತ್ತು ಸಂಸ್ಥಾಪಕ ನಿಖಿಲ್ ಹಂಜಗಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಸ್.ಟಿ. ಬಂಡಾರಿ ಮಾಲಕರು, ಫೌಂಡೇಶನ್ನ ಗುರು ಉಂಕಿ, ಪರೋಕ್ಷ ಹೂಲಿ, ವಿಜಯ್ ಮೆಹರವಾಡೆ, ಶರೀಫ್, ಕಾರ್ತಿಕ್ ಕಿಂಟಿಗೊಂಡ್, ಪುನೀತ್, ಚನ್ನಪ್ಪ, ರಾಘವೇಂದ್ರ ಬಳ್ಳಾರಿ, ಅವಿನಾಶ್, ಕಿರಣ್ ಕೊಪ್ಪದ್, ಶ್ರೇಯಸ್ ಚೆನ್ನಿ, ಅನಿಕೇತ್ ಅರ್ಚಕ, ಶ್ರೀನಿವಾಸ್, ವಿನಾಯಕ್, ಉಮೇಶ್ ಬದ್ದಿ, ರೋಹಿತ್, ವಿನೋದ್, ಅಪೇಕ್ಷ, ಬೂಮಿಕಾ, ರೇಣುಕ, ಜಾನ್ವಿ ಸುನಗರ, ಶಾಹೀನ್, ವನಮಾಲಾ, ಸ್ವಾತಿ, ವೈಷ್ಣವಿ, ಪ್ರೀತಿ, ಸಂಜನಾ, ಪ್ರೇತಿ ಸೇರಿದಂತೆ ಸಂಸ್ಥೆಯ ಸದಸ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಅವರು ಬಡ ಮಹಿಳೆಯರಿಗೆ ಸೀರೆಗಳನ್ನು ಹಂಚಿ, ಅವರ ಮುಖದಲ್ಲಿ ಸಂತೋಷದ ನಗು ಮೂಡಿಸಿದರು. ಈ ಸೇವಾ ಕಾರ್ಯಕ್ರಮವು ಹಬ್ಬದ ಸಂಭ್ರಮವನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುವ ಮಹತ್ವದ ಉದ್ದೇಶವನ್ನು ಪೂರೈಸಿದೆ.
