ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕಣಗಲಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 50 ನೇ ವಾರ್ಷಿಕ ಸರ್ವಸಾಧಾರಣ ಸಭೆಯು ದಿನಾಂಕ:14-09-2025 ರಂದು ಮದ್ಯಾಹ್ನ 12 ಗಂಟೆಗೆ ಕಣಗಲಾದ ಶ್ರೀ ಮಹಾದೇವ ಮಂದಿರದ ಸಭಾಭವನದಲ್ಲಿ ಜರುಗಿತು.
ಸಭೆಯಲ್ಲಿ ಸುಮಾರು ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು. ದಿನಾಂಕ;31-03-2025 ಕ್ಕೆ ಸಂಘದ ಲಾಭ 10,35,720/- ರೂ. , ಶೇರು ಬಂಡವಾಳ 6,71,85,343/- ರೂ. , ನಿಧಿಗಳು. 64,12,017/- ರೂ. , ಠೇವಣಿಗಳು: 6,41,351/- ರೂ. ವಾರ್ಷಿಕ ವಹಿವಾಟು:7,52,74,431/- ರೂ. ಹಾಗೂ ಸದಸ್ಯರು:1028 ಇದ್ದಾರೆಂದು ಮತ್ತು ಅವರಿಗೆ 5% ರಷ್ಟು ಡಿವಿಡೆಂಟ(ಲಾಭಾಂಶ) ನೀಡಲಾಗುವುದು ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕರು ಶ್ರೀ ತುಕಾರಾಮ ಲಕ್ಷ್ಮಣ ರೆಂಗಟೆ ಇವರು ಮಾಹಿತಿಯನ್ನು ನೀಡಿದರು.
ಸಭೆಗೆ ಸಂಘದ ಅಧ್ಯಕ್ಷರು ಶ್ರೀ ಅಶೋಕ ಗುರುನಾಥ ಹಿರೆಖೊಡಿ , ಉಪಾಧ್ಯಕ್ಷರು ಶ್ರೀ ವಿಜಯ ಬಾಳು ಪರೀಟ ಹಾಗೂ ಸದಸ್ಯರಾದ ಶ್ರೀ ಹಣುಮಂತ ನಿಂಗಪ್ಪಾ ಗಜಬರೆ, ಶ್ರೀ ಶಂಕರ ದುಂಡಪ್ಪಾ ಶಿಂಧೆ, ಶ್ರೀ ವಿರುಪಾಕ್ಷಿ ಬಾಳಪ್ಪಾ ಖಣದಾಳೆ, ಶ್ರೀ ಪದ್ಮರಾಜ ರಾವಸಾಹೇಬ ಕಮತೆ, ಶ್ರೀ ಚಂದ್ರಕಾಂತ ಪ್ರಕಾಶಹವಾಲದಾರ, ಶ್ರೀ ಮಹಾಂತೇಶ ಮಹಾದೇವ ಕೋರವಿ, ಶ್ರೀ ತುಕಾರಾಮ ಮಾರುತಿ ನಾಯಿಕ ಇವರು ಹಾಜರಿದ್ದರು. ಇವರ ಜೊತೆಗೆ ಕಣಗಲಾ ಗ್ರಾಮದ ಎಲ್ಲ ರೈತರು ಸಹ ಹಾಜರಿದ್ದರು.
ವರದಿಗಾರರು : ಸಂತೋಷ ನಿರ್ಮಲೆ . ಪಬ್ಲಿಕ ರೈಡ್ ಬೆಳಗಾವಿ
